ದುಬೈ: ದೇರಾ-ಅಲ್ ಖುಸೈಸ್ ಬದ್ರಿಯ ಫ್ರೆಂಡ್ಸ್ ವಾರ್ಷಿಕೋತ್ಸವ
ದುಬೈ, ಎ. 3: ದೇರಾ-ಅಲ್ ಖುಸೈಸ್ ಬದ್ರಿಯ ಫ್ರೆಂಡ್ಸ್ ದುಬೈ ಇದರ ವಾರ್ಷಿಕೋತ್ಸವದ ಪ್ರಯುಕ್ತ ವಾಲಿಬಾಲ್ ಹಾಗೂ ಫುಟ್ಬಾಲ್ ಪಂದ್ಯಾಟವು ಇಲ್ಲಿನ ಟೆಕ್ನಾಲಜಿ ಪ್ರೌಢ ಶಾಲಾ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆಯಿತು.
ಸಂಘದ ಅಧ್ಯಕ್ಷ ಎಂ.ಬಿ.ಮುಹಮ್ಮದ್ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಅಹ್ಮದ್ ಕೃಷ್ಣಾಪುರ, ಲತೀಫ್ ಹಂಟೆ, ನಝೀರ್, ಹನೀಫ್, ಇರ್ಷಾದ್ ಪಾಂಡೇಶ್ವರ, ಅಬ್ದುಲ್ ರಹಿಮಾನ್, ನವಾಝ್, ಅರಾಫತ್, ಮುಝಮ್ಮಿಲ್, ನಝೀರ್ ಅಹ್ಮದ್ ಭಾಗವಹಿಸಿದ್ದರು.
ಸಮೀರ್ ಸೂರಿಕುಮೇರು ಸ್ವಾಗತಿಸಿ, ನಿರೂಪಿಸಿದರು.
Next Story