ಸೌದಿ: ಇರುವೆ ಕಡಿದು ಭಾರತೀಯ ಮಹಿಳೆ ಸಾವು
ರಿಯಾದ್, ಎ. 4: ಸೌದಿ ಅರೇಬಿಯದ ರಾಜಧಾನಿ ರಿಯಾದ್ನಲ್ಲಿ ವಿಷಕಾರಿ ಇರುವೆಯೊಂದು ಕಚ್ಚಿ ಭಾರತೀಯ ಮಹಿಳೆಯೊಬ್ಬರು ಮಂಗಳವಾರ ಮೃತಪಟ್ಟಿದ್ದಾರೆ.
ಕೇರಳದ ಅಡೂರ್ ನಿವಾಸಿ ಸೂಸಿ ಜೆಫಿ (36)ಗೆ ಅವರ ನಿವಾಸದಲ್ಲಿ ಮಾರ್ಚ್ 19ರಂದು ಇರುವೆ ಕಚ್ಚಿತ್ತು ಎನ್ನಲಾಗಿದೆ. ಅಂದಿನಿಂದ ಅವರು ಚಿಕಿತ್ಸೆ ಪಡೆಯುತ್ತಿದ್ದರು ಎಂದು ‘ಮನೋರಮಾ ನ್ಯೂಸ್’ ವರದಿ ಮಾಡಿದೆ.
ಅವರು ಮಂಗಳವಾರ ಮುಂಜಾನೆ ಕೊನೆಯಸಿರೆಳೆದರು.
ಕೆಲವು ಇರುವೆ ಪ್ರಭೇದಗಳು ವಿಷಯುಕ್ತವಾಗಿದ್ದು, ಅವುಗಳು ಕಡಿದರೆ ವಯಸ್ಕ ಮನುಷ್ಯರು ಸಾಯಬಲ್ಲರು ಎಂದು ಹೇಳಲಾಗಿದೆ.
Next Story