varthabharthi

ಸಿನಿಮಾ

ಕಪಿಲ್ ಶರ್ಮಾ ವಿರುದ್ಧ ದೂರು ನೀಡಿದ ಪತ್ರಕರ್ತ

ವಾರ್ತಾ ಭಾರತಿ : 8 Apr, 2018

ಹೊಸದಿಲ್ಲಿ, ಎ,8: ಪ್ರಸಿದ್ಧ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಕಪಿಲ್ ಶರ್ಮಾ ವಿರುದ್ಧ ಮುಂಬೈ ಮೂಲದ ಪತ್ರಕರ್ತರೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಇದಕ್ಕೂ ಮೊದಲು ಕಪಿಲ್ ಶರ್ಮಾ ಪತ್ರಕರ್ತ ವಿಕ್ಕಿ ಲಲ್ವಾನಿ ವಿರುದ್ಧ ದೂರು ನೀಡಿದ್ದರು.

ಮಾನಹಾನಿಕರ ವರದಿ, ಸುಲಿಗೆಯ ಬೆದರಿಕೆಯ ಬಗ್ಗೆ ಕಪಿಲ್ ಲಲ್ವಾನಿ ವಿರುದ್ಧ ದೂರು ನೀಡಿದ್ದರೆ ಕಪಿಲ್ ಶರ್ಮಾ ಬೆದರಿಕೆಯೊಡ್ಡಿದ್ದಾರೆ, ತನ್ನನ್ನು ನಿಂದಿಸಿದ್ದಾರೆ ಎಂದು ಲಲ್ವಾನಿ ದೂರು ನೀಡಿದ್ದಾರೆ.

“ಶುಕ್ರವಾರ ಸಂಜೆ ನನಗೆ ಕಪಿಲ್ ಶರ್ಮಾ ಕರೆ ಮಾಡಿ ಕೀಳುಮಟ್ಟದ ಭಾಷೆಯಲ್ಲಿ ಮಾತನಾಡಿದರು. ಈ ಕರೆಯ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ನನಗೆ ಹಲವರು ಕರೆ ಮಾಡಿದ್ದು, ಬೆಂಬಲ ವ್ಯಕ್ತಪಡಿಸಿದ್ದಾರೆ” ಎಂದು ಲಲ್ವಾನಿ ಹೇಳಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)