132 ಕೋಟಿ ರೂಪಾಯಿಯ ನಂಬರ್ ಪ್ಲೇಟ್...!
F1 ಬ್ರಿಟನ್ನಲ್ಲಿ ಆನ್ಲೈನ್ನಲ್ಲಿ ಕಾರಿನ ನಂಬರ್ ಪ್ಲೇಟ್ವೊಂದನ್ನು ಮಾರಾಟಕ್ಕಿಡಲಾಗಿದೆ. ನಿಮ್ಮ ಬಳಿ ವೆಚ್ಚ ಮಾಡಲು ರಾಶಿರಾಶಿ ಹಣವಿದ್ದರೆ ಈ ನಂಬರ್ಪ್ಲೇಟ್ನ್ನು ಖರೀದಿಸಲು ಒಂದು ಪ್ರಯತ್ನವನ್ನು ಮಾಡಬಹುದು. ಅಂದ ಹಾಗೆ ಇದು ಚಿನ್ನದಿಂದ ಮಾಡಿದ ಅಥವಾ ವಜ್ರಖಚಿತ ನಂಬರ್ಪ್ಲೇಟ್ ಎಂದು ನೀವು ಭಾವಿಸಬೇಕಿಲ್ಲ. ಇದು ಸಾಮಾನ್ಯ ಕಾರ್ ನಂಬರ್ ಪ್ಲೇಟ್ ಆಗಿದೆ. ಬ್ರಿಟನ್ ನಿವಾಸಿ ಅಫ್ಝಲ್ ಖಾನ್ ಅವರು ಸದ್ಯ ತನ್ನ ಬುಗಟ್ಟಿ ವೆರಿಯಾನ್ ಕಾರಿಗೆ ಅಳವಡಿಸಿರುವ ಈ ಫ್ಯಾನ್ಸಿ ನಂಬರ್ನ ಮಾರಾಟಕ್ಕಾಗಿ ಆನ್ಲೈನ್ ಜಾಹಿರಾತನ್ನು ಪೋಸ್ಟ್ ಮಾಡಿದ್ದಾರೆ.
F1 ಹಳದಿ ಬಣ್ಣದ ಹಿನ್ನೆಲೆಯಲ್ಲಿ ಕೇವಲ ಎರಡು ಅಕ್ಷರಗಳನ್ನು ಹೊಂದಿರುವ ಈ ನಂಬರ್ ಪ್ಲೇಟ್ನಲ್ಲಿರುವ ಯುರೋ ಶೈಲಿಯ ಫಾರ್ಮ್ಯುಲಾ 1 ಅರ್ಥವನ್ನು ನೀಡುತ್ತದೆ. ಖಾನ್ ಅವರು ಈ ವರ್ಷದ ಆರಂಭದಲ್ಲಿ ಸುಮಾರು 10.52 ಕೋ.ರೂ.ಗಳನ್ನು ನೀಡಿ ಈ ಫ್ಯಾನ್ಸಿ ಕಾರ್ ನಂಬರ್ ಖರೀದಿಸಿದ್ದರು, ಆದರೆ ಅವರ ಉದ್ದೇಶವೇನಾಗಿತ್ತು ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಒಂದೇ ಅವರು ಫಾರ್ಮ್ಯುಲಾ 1 ರೇಸ್ನ ಕಟ್ಟಾಭಿಮಾನಿಯಾಗಿರಬೇಕು ಇಲ್ಲವೇ ತನ್ನ ಹೂಡಿಕೆಗಳ ಬಗ್ಗೆ ಚೆನ್ನಾಗಿ ತಿಳುವಳಿಕೆಯನ್ನು ಹೊಂದಿದವರಾಗಿಬೇಕು. ಇವೆರಡೂ ಅಲ್ಲದಿದ್ದರೆ ಸುಮ್ಮನೆ ‘ಶೋ’ ಮಾಡಲು ಈ ನಂಬರ್ಪ್ಲೇಟ್ನ್ನು ಖರೀದಿಸಿರಬೇಕು.
ವಿಶ್ವದ ಇತರ ಹಲವಾರು ದೇಶಗಳಿಗಿಂತ ಭಿನ್ನವಾಗಿ ಬ್ರಿಟನ್ನಿನ ಪ್ರಜೆಗಳು ತಮ್ಮ ಕಾರ್ ನಂಬರ್ ಪ್ಲೇಟ್ಗಳ ಅಕ್ಷರಶಃ ಒಡೆತನವನ್ನು ಹೊಂದಿರು ತ್ತಾರೆ. ಅವರು ಅವುಗಳನ್ನು ಬೇರೆಯವರಿಗೆ ಮಾರಾಟ ಮಾಡಲು ಅಥವಾ ಹರಾಜು ಹಾಕಲು ಮುಕ್ತರಾಗಿರುತ್ತಾರೆ. ಬ್ರಿಟನ್ನಿನ ರೆಜ್ಟ್ರಾನ್ಸ್ಫರ್ಸ್ನ ವೆಬ್ಸೈಟ್ನಲ್ಲಿ ಹಲವಾರು ನಂಬರ್ಪ್ಲೇಟ್ಗಳು ಮಾರಾಟಕ್ಕಿವೆ. ರೆಜ್ಟ್ರಾನ್ಸ್ಫರ್ಸ್ ಅಲ್ಲಿಯ ಅಧಿಕೃತ ನಂಬರ್ ಪ್ಲೇಟ್ಗಳ ಪ್ರಮುಖ ಪೂರೈಕೆ ಸಂಸ್ಥೆಯಾಗಿದೆ. ಡೇವಿಡ್ ಬೆಕ್ಹಾಮ್, ವೇಯ್ನೆ ರೂನಿ, ಸರ್ ಇಯಾನ್ ಬಾಥಂ ಮತ್ತು ಬಾಕ್ಸಿಂಗ್ ತಾರೆ ಆಮಿರ್ ಖಾನ್ರಂತಹ ಪ್ರತಿಷ್ಠಿತರು ಅದರ ಗ್ರಾಹಕರಲ್ಲಿ ಸೇರಿದ್ದಾರೆ.
F1ಈಗ ಖಾನ್ ಮಾರಾಟಕ್ಕಿಟ್ಟಿರುವ ನಂಬರ್ ಪ್ಲೇಟ್ನ ಬೆಲೆಯತ್ತ ಗಮನ ಹರಿಸೋಣ. ಈ ನಂಬರ್ಪ್ಲೇಟ್ನ ಬೆಲೆ ‘ಕೇವಲ‘110 ಕೋಟಿ ರೂ. ಶೇ.20ರಷ್ಟು ವ್ಯಾಟ್ ಮತ್ತು ವರ್ಗಾವಣೆ ಶುಲ್ಕ ಇತ್ಯಾದಿಗಳನ್ನು ಸೇರಿಸಿದರೆ 132 ಕೋ.ರೂ.ಗಿಂತ ಕೊಂಚ ಹೆಚ್ಚಾಗುತ್ತದೆ,ಅಷ್ಟೇ! ಈ ಬೆಲೆಗೆ ಇದನ್ನು ಯಾರಾದರೂ ಖರೀದಿಸಿದರೆ ಇದು ವಿಶ್ವದಲ್ಲಿ ಅತ್ಯಂತ ದುಬಾರಿ ಬೆಲೆಗೆ ಮಾರಾಟವಾದ ಕಾರ್ ನಂಬರ್ ಪ್ಲೇಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಈ ಹಿಂದೆ 2008ರಲ್ಲಿ ಅರಬ್ ಉದ್ಯಮಿ ಸಯೀದ್ ಅಬ್ದುಲ್ ಗಫೂರ್ ಖೌರಿ ಅವರು ‘1’ ಸಂಖ್ಯೆಯನ್ನು ಹೊಂದಿದ್ದ ಸ್ಥಳೀಯ ನಂಬರ್ ಪ್ಲೇಟ್ಗೆ ಸುಮಾರು 14.3 ಮಿಲಿಯನ್ ಡಾಲರ್ಗಳನ್ನು ತೆತ್ತಿದ್ದರು. ಈ ನಂಬರ್ ಪ್ಲೇಟ್ನ ಅಧಿಕೃತ ಪ್ರತಿಗಳನ್ನು ಅವರು ತನ್ನ ಬಳಿಯಿರುವ ಹಲವಾರು ಕಾರುಗಳಿಗೆ ಬಳಸುತ್ತಿದ್ದಾರೆ.