ಶೂಟಿಂಗ್ ಡಬಲ್ ಟ್ರ್ಯಾಪ್:ಶ್ರೇಯಸಿ ಸಿಂಗ್ ಗೆ ಚಿನ್ನ
ಗೋಲ್ಡ್ ಕೋಸ್ಟ್, ಎ.11: ಇಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಗೇಮ್ಸ್ ನ ಮಹಿಳೆಯರ ಶೂಟಿಂಗ್ ನ ಡಬಲ್ ಟ್ರ್ಯಾಪ್ನಲ್ಲಿ ಭಾರತದ ಶ್ರೇಯಸಿ ಸಿಂಗ್ ಚಿನ್ನ ಪಡೆದಿದ್ದಾರೆ.
ಶ್ರೇಯಸಿ ಜೊತೆ ಸ್ಪರ್ಧಿಸಿದ್ದ ವರ್ಷಾ ವರ್ಮನ್ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಶ್ರೇಯಸಿ ಅವರು ಒಟ್ಟು 96 +2 ಪಾಯಿಂಟ್ಸ್ ದಾಖಲಿಸಿ ಚಿನ್ನ ಪಡೆದರು. ಇದರೊಂದಿಗೆ ಶೂಟಿಂಗ್ ನಲ್ಲಿ ಭಾರತಕ್ಕೆ 4ನೇ ಚಿನ್ನ ಸಿಕ್ಕಿದೆ.
ಗ್ಲಾಸ್ಗೋದಲ್ಲಿ ಕಳೆದ ಆವೃತ್ತಿಯ ಕಾಮನ್ ವೆಲ್ತ್ ನ ಮಹಿಳೆಯರ ಶೂಟಿಂಗ್ ಡಬಲ್ ಟ್ರ್ಯಾಪ್ನ ಫೈನಲ್ನಲ್ಲಿ ಯುವ ಶೂಟರ್ ಶ್ರೇಯಸಿ ಸಿಂಗ್ ಒಟ್ಟು 92 ಅಂಕಗಳನ್ನು ದಾಖಲಿಸಿ ಬೆಳ್ಳಿ ಪದಕ ಜಯಿಸಿದ್ದರು. ಇದೀಗ ಪ್ರದರ್ಶನವನ್ನು ಉತ್ತಮಪಡಿಸಿ ಚಿನ್ನ ಪಡೆದಿದ್ದಾರೆ.
Next Story