ಯುಎಇ: ಭಿಕ್ಷೆ ಬೇಡಿದರೆ ಭಾರೀ ದಂಡ, ಜೈಲು
ಅಬುಧಾಬಿ (ಯುಎಇ), ಎ. 18: ಭಿಕ್ಷೆ ಬೇಡುವುದನ್ನು ನಿಷೇಧಿಸುವ ಕಾನೂನಿಗೆ ಯುಎಇ ಅಂಗೀಕಾರ ನೀಡಿದೆ.
ಈ ಕಾನೂನಿನ ಪ್ರಕಾರ, ದೇಶದಲ್ಲಿ ಯಾರಾದರೂ ಭಿಕ್ಷೆ ಬೇಡುವುದು ಪತ್ತೆಯಾದರೆ ಅವರಿಗೆ 5000 ದಿರ್ಹಮ್ (ಸುಮಾರು 89,500 ರೂಪಾಯಿ) ದಂಡ ಹಾಗೂ 3 ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಫೆಡರಲ್ ನ್ಯಾಶನಲ್ ಕೌನ್ಸಿಲ್ ಮಂಗಳವಾರ ಪ್ರಕಟಿಸಿದೆ.
Next Story