ಸಿರಿಯದಲ್ಲಿ ಐಸಿಸ್ ವಿರುದ್ಧ ವಾಯು ದಾಳಿ: ಇರಾಕ್
ಬಗ್ದಾದ್, ಎ. 19: ಸಿರಿಯದಲ್ಲಿರುವ ಐಸಿಸ್ ನೆಲೆಗಳ ಮೇಲೆ ಇರಾಕ್ ವಾಯು ಪಡೆ ಗುರುವಾರ ‘ಮಾರಕ ದಾಳಿ’ ನಡೆಸಿರುವುದಾಗಿ ಇರಾಕ್ ಪ್ರಧಾನಿ ಹೈದರ್ ಅಲ-ಅಬಾದಿ ಕಚೇರಿ ತಿಳಿಸಿದೆ.
‘‘ಇರಾಕ್ ಭೂಭಾಗಕ್ಕೆ ಐಸಿಸ್ ಭಯೋತ್ಪಾದಕರು ಬೆದರಿಕೆಯಾಗಿರುವ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ’’ ಎಂದು ಹೇಳಿಕೆಯೊಂದು ತಿಳಿಸಿದೆ.
ಎರಡು ಎಫ್-16 ಯುದ್ಧ ವಿಮಾನಗಳು ದಾಳಿಯಲ್ಲಿ ಭಾಗವಹಿಸಿರುವುದನ್ನು ವೀಡಿಯೊವೊಂದು ತೋರಿಸಿದೆ.
ಇರಾಕ್ ಐಸಿಸ್ ವಿರುದ್ಧ ಡಿಸೆಂಬರ್ನಲ್ಲಿ ವಿಜಯವನ್ನು ಘೋಷಿಸಿದೆಯಾದರೂ, ಸಿರಿಯ ಗಡಿಯಲ್ಲಿರುವ ಮರುಭೂಮಿಯ ಹಲವು ಸ್ಥಳಗಳಲ್ಲಿ ಅವರು ನಿಯಂತ್ರಣ ಹೊಂದಿದ್ದಾರೆ.
Next Story