ಮಂಡ್ಯ: ದೊಡ್ಡಪ್ಪನ ಮಗನಿಂದ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಆರೋಪ; ಅಪ್ಪ-ಮಗನ ಬಂಧನ
ಮಂಡ್ಯ, ಎ.19: ದೊಡ್ಡಪ್ಪನ ಮಗನಿಂದ ಅಪ್ರಾಪ್ತೆ ಬಾಲಕಿ ಮೇಲೆ ನಿರಂತರ ಅತ್ಯಾಚಾರ ನಡೆದಿರುವುದು ಬೆಳಕಿಗೆ ಬಂದಿದ್ದು, ಈ ಸಂಬಂಧ ಅಪ್ಪ ಮಗನನ್ನು ಕೆ.ಆರ್.ಪೇಟೆ ಪೊಲೀಸರು ಬಂಧಿಸಿದ್ದಾರೆ.
ತಂದೆ ರಮೇಶ್ (50) ಮತ್ತು ಪುತ್ರ ಜಯೇಶ್(26) ಬಂಧಿತ ಆರೋಪಿಗಳು. ಮಗನ ಅತ್ಯಾಚಾರಕ್ಕೆ ರಮೇಶ್ ಪ್ರೋತ್ಸಾಹ ನೀಡಿದ್ದ ಎನ್ನಲಾಗಿದೆ.
ಅಪ್ರಾಪ್ತೆ ಬಾಲಕಿಯ ತಂದೆ ಮೃತಪಟ್ಟಿದ್ದು, ತಾಯಿ ಬಾಲಕಿಯ ಜತೆ ತನ್ನ ತವರು ಗ್ರಾಮಕ್ಕೆ ತೆರಳಿ ತವರು ಮನೆಯಲ್ಲಿ ವಾಸವಿದ್ದರು ಎನ್ನಲಾಗಿದೆ.
ಎಸ್ಎಸ್ಎಲ್ಸಿ ಓದುತ್ತದ್ದ ಬಾಲಕಿಯನ್ನು ಸೋದರ ಅತ್ತೆ ಮಗನಿಗೆ ಮದುವೆ ಮಾಡುತ್ತೇನೆಂದು ಆಕೆಯ ದೊಡ್ಡಪ್ಪನ ಮಗ ಜಯೇಶ್ ತಮ್ಮ ಮನೆಗೆ ದಸರಾ ರಜೆಯಲ್ಲಿ ತನ್ನ ಮನೆಗೆ ಕರೆದುಕೊಂಡು ಬಂದಿದ್ದ. ತನ್ನ ಮನೆಯಲ್ಲಿಟ್ಟುಕೊಂಡ ಬಾಲಕಿಯ ಜತೆ ಜಯೇಶ್ ನಿರಂತರ ಲೈಂಗಿಕ ಸಂಪರ್ಕದಲ್ಲಿದ್ದ ಎಂದು ಆರೋಪಿಸಲಾಗಿದ್ದು, ಇದು ತಿಳಿದು ಸೋದರ ಅತ್ತೆ ಮಗ ಮದುವೆಗೆ ನಿರಾಕರಿಸಿದ್ದ ಎಂದು ತಿಳಿದು ಬಂದಿದೆ.
ಈ ವಿಚಾರವಾಗಿ ಗಲಾಟೆ ನಡೆದು ತಾಯಿಯ ಮನೆಗೆ ಬಾಲಕಿ ನಡೆದಿದ್ದಾಳೆ. ಈ ನಡುವೆ ಆಕೆ ಗರ್ಭಿಣಿಯಾಗಿರುವುದು ಬೆಳಕಿಗೆ ಬಂದು, ಆಕೆಯ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನ ಹಿನ್ನೆಲೆಯಲ್ಲಿ ಪೊಲೀಸರು ರಮೇಶ್ ಹಾಗೂ ಜಯೇಶ್ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿಡಲು ನ್ಯಾಯಾಧೀಶರು ಆದೇಶಿಸಿದ್ದಾರೆ.