6 ತಿಂಗಳ ಮಗುವಿನ ಅತ್ಯಾಚಾರಗೈದು ಹತ್ಯೆ
ಕಥುವಾ ಘಟನೆ ಬಳಿಕ ಮತ್ತೊಂದು ಪೈಶಾಚಿಕ ಕೃತ್ಯ
ಇಂದೋರ್, ಎ.21: 6 ತಿಂಗಳ ಮಗುವೊಂದನ್ನು ಅತ್ಯಾಚಾರಗೈದು, ಕೊಲೆಗೈದಿರುವ ಘಟನೆ ಇಂದೋರ್ ನ ರಾಜ್ವಾಡದಲ್ಲಿ ನಡೆದಿದೆ. ಮಗುವಿನ ಮೃತದೇಹ ಶಿವ ವಿಲಾಸ್ ಪ್ಯಾಲೇಸ್ ಕಟ್ಟಡದ ಬೇಸ್ ಮೆಂಟ್ ನಲ್ಲಿ ಪತ್ತೆಯಾಗಿದೆ.
ಶಂಕಿತ,ಕುಟುಂಬದ ಸದಸ್ಯನೋರ್ವ ಪೊಲೀಸ್ ಕಸ್ಟಡಿಯಲ್ಲಿದ್ದಾನೆ ಎಂದು ತಿಳಿದುಬಂದಿದೆ. ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಖಚಿತಗೊಂಡಿದೆ. ತಲೆಗೆ ಗಂಭೀರ ಗಾಯವಾದ ಕಾರಣ ಮಗು ಮೃತಪಟ್ಟಿದೆ ಎನ್ನಲಾಗಿದೆ.
ರಾಜ್ವಾಡದಲ್ಲಿ ಈ ಘಟನೆ ನಡೆದಿದ್ದು, ಕುಟುಂಬದ ಸದಸ್ಯರೊಂದಿಗೆ ಮಲಗಿದ್ದ ಮಗುವನ್ನು ದುಷ್ಕರ್ಮಿ ಅಪಹರಿಸಿದ್ದ. ಸೈಕಲ್ ನಲ್ಲಿ ಬಂದ ವ್ಯಕ್ತಿ ಹೆಣ್ಣುಮಗುವನ್ನು ಎತ್ತಿಕೊಂಡು ವಸತಿ ಕಟ್ಟಡದ ಕಡೆಗೆ ತೆರಳುವುದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮುಂಜಾನೆ 3 ಗಂಟೆಯ ಹೊತ್ತಿಗೆ ಮಗುವಿನ ತಾಯಿಗೆ ಎಚ್ಚರವಾಗಿದ್ದು, ಎಲ್ಲಾ ಮಕ್ಕಳು ಅಲ್ಲಿದ್ದರು. ಆದರೆ 5:30ಕ್ಕೆ ಎಚ್ಚರವಾದಾಗ ಮಗು ನಾಪತ್ತೆಯಾಗಿರುವುದು ಗಮನಕ್ಕೆ ಬಂದಿತ್ತು. ಸುತ್ತಮುತ್ತ ಹುಡುಕಾಟ ನಡೆಸಿದ ನಂತರ ಈ ಬಗ್ಗೆ ದೂರು ನೀಡಲಾಗಿತ್ತು.