ಮೋದಿಯನ್ನು ಲಂಕಾ ಅಧ್ಯಕ್ಷ ಎಂದ ಬಿಬಿಸಿ
ಲಂಡನ್, ಎ. 21: ಶುಕ್ರವಾರ ರಾತ್ರಿ ನಡೆದ ಕಾಮನ್ವೆಲ್ತ್ ಸರಕಾರಗಳ ಮುಖ್ಯಸ್ಥರ ಸಭೆಯ ನೇರಪ್ರಸಾರದ ವೇಳೆ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನರನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಎಂಬುದಾಗಿ ಕರೆದಿರುವುದಕ್ಕೆ ಬಿಬಿಸಿ ಶನಿವಾರ ಕ್ಷಮೆ ಕೋರಿದೆ.
ಸಭೆಯಲ್ಲಿ ಭಾಗವಹಿಸುವುದಕ್ಕಾಗಿ ಬಕಿಂಗ್ಹ್ಯಾಮ್ ಅರಮನೆಗೆ ಆಗಮಿಸಿದ ಶ್ರೀಲಂಕಾ ಅಧ್ಯಕ್ಷರು ಕಾರಿನಿಂದ ಇಳಿಯುತ್ತಿರುವಾಗ, ಬಿಬಿಸಿ ಕಾರ್ಯಕ್ರಮ ನಿರೂಪಕರು, ಮೋದಿ ಆಗಮಿಸುತ್ತಿದ್ದಾರೆ’’ ಎಂದಿದ್ದರು.
‘‘ಇದು ನೇರಪ್ರಸಾರದ ವೇಳೆ ನಡೆದ ತಪ್ಪಾಗಿತ್ತು. ನಮ್ಮ ತಪ್ಪಿಗಾಗಿ ನಾವು ಕ್ಷಮೆ ಕೋರುತ್ತೇವೆ’’ ಎಂದು ಬಿಬಿಸಿ ವಕ್ತಾರರೊಬ್ಬರು ಹೇಳಿದ್ದಾರೆ.
Next Story