ಮಾಂಟೆಕಾರ್ಲೊ ಮಾಸ್ಟರ್ಸ್: ನಡಾಲ್ ಫೈನಲ್ಗೆ
ಮಾಂಟೆಕಾರ್ಲೊ, ಎ.21: ವಿಶ್ವದ ನಂ.1 ಟೆನಿಸ್ ಆಟಗಾರ ರಫೆಲ್ ನಡಾಲ್ ಬಲ್ಗೇರಿಯದ ಗ್ರಿಗೊರ್ ಡಿಮಿಟ್ರೊವ್ರನ್ನು ನೇರ ಸೆಟ್ಗಳಿಂದ ಸೋಲಿಸುವ ಮೂಲಕ ಮಾಂಟೆಕಾರ್ಲೊ ಮಾಸ್ಟರ್ಸ್ ಟೂರ್ನಿಯಲ್ಲಿ 12ನೇ ಬಾರಿ ಫೈನಲ್ಗೆ ಲಗ್ಗೆ ಇಟ್ಟಿದ್ದಾರೆ.
ಇಲ್ಲಿ ಶನಿವಾರ ನಡೆದ ಪುರುಷರ ಸಿಂಗಲ್ಸ್ನ ಸೆಮಿ ಫೈನಲ್ ಪಂದ್ಯದಲ್ಲಿ 31ರ ಹರೆಯದ ನಡಾಲ್ ಅವರು ಡಿಮಿಟ್ರೊವ್ರನ್ನು 6-4, 6-1 ಸೆಟ್ಗಳಿಂದ ಸೋಲಿಸಿದರು. ನಡಾಲ್ ನಂ.1 ಸ್ಥಾನ ಉಳಿಸಿಕೊಳ್ಳಬೇಕಾದರೆ 11ನೇ ಬಾರಿ ಮಾಂಟೆಕಾರ್ಲೊ ಮಾಸ್ಟರ್ಸ್ ಪ್ರಶಸ್ತಿಯನ್ನು ಗೆಲ್ಲಬೇಕಾಗಿದೆ.
ನಡಾಲ್ ಫೈನಲ್ನಲ್ಲಿ ಕೀ ನಿಶಿಕೊರಿ ಅಥವಾ ಅಲೆಕ್ಸಾಂಡರ್ ಝ್ವೆರೆವ್ರನ್ನು ಎದುರಿಸಲಿದ್ದಾರೆ. ನಡಾಲ್ ಮೊದಲ ಸೆಟ್ನಲ್ಲಿ ಸ್ವಲ್ಪ ಮಟ್ಟಿನ ಸ್ಪರ್ಧೆ ಎದುರಿಸಿದರು. ಆದರೆ, ಎರಡನೇ ಸೆಟ್ನಲ್ಲಿ ಮೈಕೊಡವಿ ಆಡಿದ ನಡಾಲ್ ಅರ್ಧಗಂಟೆಯೊಳಗೆ ಪಂದ್ಯವನ್ನು ಗೆದ್ದುಕೊಂಡರು. ಅಗ್ರ ಶ್ರೇಯಾಂಕದ ನಡಾಲ್ಗೆ 31ನೇ ಮಾಸ್ಟರ್ಸ್ ಪ್ರಶಸ್ತಿ ಜಯಿಸಲು ಇನ್ನೊಂದು ಗೆಲುವು ಅಗತ್ಯವಿದೆ. ಜನವರಿಯಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್ನಲ್ಲಿ ಮಾರ್ಟಿನ್ ಸಿಲಿಕ್ ವಿರುದ್ಧ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗಾಯಾಳು ನಿವೃತ್ತಿಯಾದ ಬಳಿಕ ಮೊದಲ ಬಾರಿ ನಡಾಲ್ ಎಟಿಪಿ ಟೂರ್ನಮೆಂಟ್ನಲ್ಲಿ ಆಡಿದ್ದಾರೆ.