ರಾಜಸ್ಥಾನದ ಸೋಲಿಗೆ ಕ್ಷಮೆಕೋರಿದ ಶೇನ್ ವಾರ್ನ್
ಪುಣೆ, ಎ.21: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 64 ರನ್ಗಳಿಂದ ಹೀನಾಯವಾಗಿ ಸೋಲುವ ಮೂಲಕ ಕಳಪೆ ಪ್ರದರ್ಶನ ನೀಡಿದ್ದ ರಾಜಸ್ಥಾನದ ಪರವಾಗಿ ಮೆಂಟರ್ ಶೇನ್ ವಾರ್ನ್ ಕ್ಷಮೆಯಾಚಿಸಿದ್ದಾರೆ.
ರಾಜಸ್ಥಾನ ಅಭಿಮಾನಿಗಳು ತಂಡದ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳದೇ ಇದೇ ರೀತಿ ಬೆಂಬಲವನ್ನು ನೀಡಬೇಕು. ನಾವು ಬ್ಯಾಟಿಂಗ್, ಫೀಲ್ಡಿಂಗ್ ಹಾಗೂ ಬೌಲಿಂಗ್ ಸಹಿತ ಎಲ್ಲ ಮೂರು ವಿಭಾಗದಲ್ಲಿ ಕಳಪೆ ಪ್ರದರ್ಶನ ನೀಡಿದ್ದೇವೆ. ಚೆನ್ನೈ ದಾಂಡಿಗ ವಾಟ್ಸನ್ ಉತ್ತಮ ಬ್ಯಾಟಿಂಗ್ ಮಾಡಿದ್ದಾರೆ. ಮುಂದಿನ ಪಂದ್ಯದಲ್ಲಿ ನಮ್ಮ ಹುಡುಗರು ಉತ್ತಮ ಪ್ರದರ್ಶನ ನೀಡಲು ಯತ್ನಿಸಲಿದ್ದಾರೆ. ಹಾಗಾಗಿ ಎಲ್ಲ ಕ್ರಿಕೆಟ್ ಅಭಿಮಾನಿಗಳು ತಾಳ್ಮೆಯಿಂದಿರಬೇಕು’’ ಎಂದು ವಾರ್ನ್ ಟ್ವೀಟ್ ಮಾಡಿದ್ದಾರೆ.
Next Story