30ನೇ ಕೊಪಾ ಡೆಲ್ ರೇ ಪ್ರಶಸ್ತಿ ಜಯಿಸಿದ ಬಾರ್ಸಿಲೋನ
ಮ್ಯಾಡ್ರಿಡ್, ಎ.22: ಲೂಯಿಸ್ ಸುಯರೆಝ್ ಅವಳಿ ಗೋಲು ಹಾಗೂ ಲಿಯೊನೆಲ್ ಮೆಸ್ಸಿ ಅವರ ಸಾಹಸದ ನೆರವಿನಿಂದ ಬಾರ್ಸಿಲೋನ ತಂಡ ಸೆವಿಲ್ಲಾ ವಿರುದ್ಧ ಪಂದ್ಯವನ್ನು 5-0 ಅಂತರದಿಂದ ಗೆದ್ದುಕೊಂಡು 30ನೇ ಬಾರಿ ಕೊಪಾ ಡೆಲ್ ರೇ ಟ್ರೋಫಿ ಜಯಿಸಿ ದಾಖಲೆ ನಿರ್ಮಿಸಿತು.
ಸುಯರೆಝ್ 14ನೇ ಹಾಗೂ 40ನೇ ನಿಮಿಷದಲ್ಲಿ ಗೋಲು ಬಾರಿಸಿದ್ದಾರೆ. ಮೆಸ್ಸಿ 31ನೇ ನಿಮಿಷ, ಆ್ಯಂಡ್ರೆಸ್ ಇನಿಯೆಸ್ಟಾ(52ನೇ ನಿಮಿಷ) ಹಾಗೂ ಫಿಲಿಪ್ ಕೌಟಿನೊ(69ನೇ ನಿಮಿಷ)ತಲಾ ಒಂದು ಗೋಲು ಬಾರಿಸಿ ತಂಡದ ಭರ್ಜರಿ ಗೆಲುವಿಗೆ ಕಾಣಿಕೆ ನೀಡಿದರು.
ಕಳೆದ 5 ವರ್ಷಗಳಿಂದ ಫೈನಲ್ಗೆ ತಲುಪುತ್ತಾ ಬಂದಿರುವ ಬಾರ್ಸಿಲೋನ ಸತತ ನಾಲ್ಕನೇ ಬಾರಿ ಕೊಪಾ ಡೆಲ್ ರೇ ಪ್ರಶಸ್ತಿ ಬಾಚಿಕೊಂಡಿತು. ಸುಯರೆಝ್ ಈ ಋತುವಿನಲ್ಲಿ 31ನೇ ಹಾಗೂ 32ನೇ ಗೋಲು ಬಾರಿಸಿ ಗಮನ ಸೆಳೆದರು.
Next Story