13 ವರ್ಷದ ಬಾಲಕಿಯ ಸಾಮೂಹಿಕ ಅತ್ಯಾಚಾರ
ಯಮುನಾನಗರ, ಎ.23: ಹರ್ಯಾಣದ ಯಮುನಾ ನಗರದ ದೇವಾಲಯದ ಸಮೀಪ 13 ವರ್ಷದ ಬಾಲಕಿಯ ಮೇಲೆ ನಾಲ್ವರ ಗುಂಪು ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ರವಿವಾರ ನಡೆದಿದೆ.
ಬಾಲಕಿಯ ಹೆತ್ತವರು ಮನೆಯಲ್ಲಿ ಇಲ್ಲದ ಸಂದರ್ಭ ಈ ಘಟನೆ ನಡೆದಿದೆ. ಬಾಲಕಿ ತನ್ನ ಮನೆಯಲ್ಲಿ ಸಂಬಂಧಿಕರೊಂದಿಗೆ ಮಲಗಿದ್ದ ಸಂದರ್ಭ ನಾಲ್ವರು ಮನೆಯ ಒಳಗೆ ನುಗ್ಗಿ ಬಾಲಕಿಯನ್ನು ಅಪಹರಿಸಿದ್ದರು. ನಂತರ ಬಾಲಕಿಯನ್ನು ದೇವಾಲಯದ ಸಮೀಪ ಕೊಂಡೊಯ್ದು ಅತ್ಯಾಚಾರ ಎಸಗಿದ್ದಾರೆ. ಬಳಿಕ ಬಾಲಕಿಯ ತಲೆಯನ್ನು ಗೋಡೆಗೆ ಗುದ್ದಿದ್ದಾರೆ. ಆಕೆ ಪ್ರಜ್ಞೆ ಕಳೆದುಕೊಂಡ ಬಳಿಕ ಅಲ್ಲಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ. ‘‘ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ನಾವು ಪ್ರಕರಣ ದಾಖಲಿಸಿಕೊಂಡಿದ್ದೇವೆ. ಆರೋಪಿಗಳನ್ನು ಬಂಧಿಸಲು ಶೋಧ ಕಾರ್ಯಾಚರಣೆ ಮುಂದುವರಿದಿದೆ’’ ಎಂದು ಯಮುನಾನಗರ ಪೊಲೀಸ್ ಠಾಣೆಯ ಅಧಿಕಾರಿ ಶೀಲಾ ಹೇಳಿದ್ದಾರೆ.
Next Story