ಈತನಿಗೆ 330 ವರ್ಷ ಜೈಲು ಶಿಕ್ಷೆ ವಿಧಿಸಿದೆ ನ್ಯಾಯಾಲಯ
ಫೋರ್ಟ್ ಮಯರ್ಸ್ (ಅಮೆರಿಕ), ಎ. 23: ಮಕ್ಕಳ ನೀಲಿಚಿತ್ರಗಳನ್ನು ತಯಾರಿಸಿದ ಪ್ರಕರಣದಲ್ಲಿ ಅಮೆರಿಕದ ಫ್ಲೋರಿಡ ರಾಜ್ಯದ ವ್ಯಕ್ತಿಯೊಬ್ಬನಿಗೆ ನ್ಯಾಯಾಲಯವೊಂದು 330 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಡೇವಿಡ್ ಲಿಂಚ್ ಈ ಉದ್ದೇಶಕ್ಕಾಗಿ ಪದೇ ಪದೇ ಫಿಲಿಪ್ಪೀನ್ಸ್ಗೆ ಹೋಗುತ್ತಿದ್ದ ಹಾಗೂ ಅಲ್ಲಿ ಮಕ್ಕಳೊಂದಿಗೆ ಸರಸವಾಡುತ್ತಿದ್ದ. ಮಕ್ಕಳೊಂದಿಗಿನ ತನ್ನ ಕೃತ್ಯಗಳನ್ನು ಆತ ಚಿತ್ರೀಕರಿಸಿ ಇಂಟರ್ನೆಟ್ನಲ್ಲಿ ಹಾಕುತ್ತಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ವಿಕೃತ ಕಾಮಿಯ ಸಂತ್ರಸ್ತರ ಪೈಕಿ 6 ವರ್ಷಗಳ ಮಕ್ಕಳೂ ಇದ್ದರು. ಈ ವೀಡಿಯೊಗಳನ್ನು ಅವನು 2005ರಲ್ಲಿ ಆನ್ಲೈನ್ ಡೇಟಿಂಗ್ ವೆಬ್ಸೈಟ್ಗಳಲ್ಲಿ ಹಾಕುತ್ತಿದ್ದನು ಎನ್ನಲಾಗಿದೆ.
Next Story