ಟೊರಾಂಟೊದಲ್ಲಿ ಪಾದಾಚಾರಿಗಳ ಮೇಲೆ ವ್ಯಾನ್ ನುಗ್ಗಿಸಿದ ಚಾಲಕ; 10 ಸಾವು
ಟೊರಾಂಟೊ, ಎ.24: ಕೆನಡಾದ ಟೊರಂಟೋದಲ್ಲಿ ವ್ಯಾನೊಂದನ್ನು ಚಾಲಕನು ಪಾದಾಚಾರಿಗಳ ಮೇಲೆ ಸೋಮವಾರ ರಾತ್ರೆ ಉದ್ದೇಶಪೂರ್ವಕವಾಗಿ ನುಗ್ಗಿಸಿದ ಪರಿಣಾಮವಾಗಿ ಕನಿಷ್ಠ 10ಮಂದಿ ಮೃತಪಟ್ಟು , 16 ಮಂದಿ ಗಾಯಗೊಂಡಿರುವ ಘಟನೆ ವರದಿಯಾಗಿದೆ.
ವಾಹನ ಚಾಲಕ ಉದ್ದೇಶಪೂರ್ವಕವಾಗಿಯೇ ಏಕಾಏಕಿ ಪಾದಚಾರಿ ಮಾರ್ಗದ ಮೇಲೆ ವ್ಯಾನ್ ನ್ನು ಹರಿಸಿದ್ದಾನೆ ಎಂದು ತಿಳಿದು ಬಂದಿದೆ.
ಘಟನೆ ಬಳಿಕ ಚಾಲಕ ಪರಾರಿಯಾಗುತ್ತಿದ್ದಂತೆ ಪೊಲೀಸರು ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಿದ್ದಾರೆ.
ಉದ್ದೇಶಪೂರ್ವಕ ಕೃತ್ಯ: ಪೊಲೀಸ್
ಪಾದಚಾರಿಗಳ ಮೇಲಿನ ಆಕ್ರಮಣವು ‘ಉದ್ದೇಶಪೂರ್ವಕ’ ಕೃತ್ಯವಾಗಿದೆ ಎಂದು ಟೊರಾಂಟೊ ಪೊಲೀಸ್ ಮುಖ್ಯಸ್ಥ ಮಾರ್ಕ್ ಸಾಂಡರ್ ಹೇಳಿದ್ದಾರೆ.
ಅಲೆಕ್ ಮಿನಾಸಿಯನ್ ಬಗ್ಗೆ ಪೊಲೀಸರಿಗೆ ಈವರೆಗೆ ತಿಳಿದಿಲ್ಲ ಹಾಗೂ ಆತ ಯಾವುದಾದರೂ ಭಯೋತ್ಪಾದಕ ಸಂಘಟನೆಯ ಸದಸ್ಯನೇ ಎನ್ನುವುದೂ ಗೊತ್ತಾಗಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹೇಳಿದರು.
Next Story