ಮೂಡಿಗೆರೆ ಕ್ಷೇತ್ರ: ಒಟ್ಟು 10 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ
ಮೂಡಿಗೆರೆ, ಎ.24: ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಮೋಟಮ್ಮ, ಬಿಜೆಪಿಯ ಎಂ.ಪಿ.ಕುಮಾರಸ್ವಾಮಿ, ಜೆಡಿಎಸ್ನ ಬಿ.ಬಿ.ನಿಂಗಯ್ಯ ಸಹಿತ ಇತರ 7 ಮಂದಿ ಅಭ್ಯರ್ಥಿಗಳು ಸೇರಿ ಒಟ್ಟು 10 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.
ಪಕ್ಷೇತರ ಅಭ್ಯರ್ಥಿಗಳಾಗಿ ಮೂಡಿಗೆರೆ ಪಟ್ಟಣ ನಿವಾಸಿಗಳಾದ ನಿವೃತ್ತ ಶಿಕ್ಷಕ ನಂಜುಂಡ, ಎಸ್.ವೆಂಕಟೇಶ್, ಚಿಕ್ಕಮಗಳೂರು ತಾಲೂಕು ಬಸವನಕೋಡಿ ಗ್ರಾಮದ ಮುನಿಯಪ್ಪ ಭೋವಿ, ಅರುಣಕುಮಾರ್ ಹಾಂದಿ ಉಮೇದುವಾರಿಕೆ ಸಲ್ಲಿಸಿದ್ದಾರೆ. ಪೂರ್ವಚಲ್ ಮಹಾ ಪಂಚಾಯತ್ ಪಾರ್ಟಿ ಅಭ್ಯರ್ಥಿಯಾಗಿ ಅಂಬಳೆ ಗ್ರಾಮದ ನಿಂಗಯ್ಯ ನಾಮಪತ್ರ ಸಲ್ಲಿಸಿದ್ದಾರೆ. ರಿಪಬ್ಲಿಕ್ ಸೇನೆ ಪಕ್ಷದ ಅಭ್ಯರ್ಥಿಯಾಗಿ ಲಕ್ಷ್ಮಣ ಹಾಂದಿ, ಎಂಇಪಿ ಪಕ್ಷದಿಂದ ಜಿ.ಅನಿಲ್ ನಾಮಪತ್ರ ಸಲ್ಲಿಸಿದ್ದಾರೆ.
Next Story