ಪಿಲಿಕುಳದಲ್ಲಿ ಶೂನ್ಯ ನೆರಳಿನ ದಿನದ ಪ್ರಾತ್ಯಕ್ಷಿಕೆ
ಮಂಗಳೂರು, ಎ.24: ಪಿಲಿಕುಳ ವಿಜ್ಞ್ಞಾನ ಕೇಂದ್ರದಲ್ಲಿ ಮಂಗಳವಾರ ಶೂನ್ಯ ನೆರಳಿನ ದಿನದ ವಿದ್ಯಮಾನದ ಬಗ್ಗೆ ವಿವರಣೆ ಮತ್ತು ಅದಕ್ಕೆ ಸಂಬಂಧ ಪಟ್ಟ ಪ್ರಾತ್ಯಕ್ಷಿಕೆಗಳನ್ನು ಆಸಕ್ತ ಸಂದರ್ಶಕರಿಗೆ ನೀಡಲಾಯಿತು.
ಸಂದರ್ಶಕರು ಪ್ರಾತ್ಯಕ್ಷಿಕೆಗಳನ್ನು ವೀಕ್ಷಿಸಿ ಸಂದೇಹಗಳಿಗೆ ವಿವರಣೆ ಪಡೆದುಕೊಂಡರು. ಶೈಕ್ಷಣಿಕ ಸಹಾಯಕ ಶರಣಯ್ಯ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ.ಕೆ.ರಾವ್ ಉಪಸ್ಥಿತರಿದ್ದರು.
Next Story