ಮಂಡ್ಯ: 82 ನಾಮಪತ್ರ ಸಲ್ಲಿಕೆ
ಮಂಡ್ಯ, ಎ.24: ನಾಮಪತ್ರ ಸಲ್ಲಿಸಲು ಕಡೆಯ ದಿನವಾದ ಮಂಗಳವಾರ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ 71 ಅಭ್ಯರ್ಥಿಗಳಿಂದ 82 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ ಎನ್.ಮಂಜುಳ ತಿಳಿಸಿದ್ದಾರೆ.
ಕಾಂಗ್ರೆಸ್ನಿಂದ ಗಣಿಗ ರವಿಕುಮಾರಗೌಡ, ಪಿ.ಎಂ.ನರೇಂದ್ರಸ್ವಾಮಿ, ಬಿಜೆಪಿಯಿಂದ ಬಿ.ಸೋಮಶೇಖರ್, ಸುಂಡಹಳ್ಳಿ ಸೋಮಶೇಖರ್, ಎನ್.ಶಿವಣ್ಣ, ಜೆಡಿಎಸ್ನಿಂದ ಕೆ.ಸಿ.ನಾರಾಯಣಗೌಡ, ಪಕ್ಷೇತರರಾಗಿ ಮಾಜಿ ಶಾಸಕ ಎಚ್.ಬಿ.ರಾಮು, ಬಿ.ಪ್ರಕಾಶ್, ಮೈಷುಗರ್ ಅಧ್ಯಕ್ಷ ಸಿದ್ದರಾಮೇಗೌಡ ಪ್ರಮುಖರಾಗಿದ್ದಾರೆ.
Next Story