ಭಾರತದ ಮೂವರು ಬಾಕ್ಸರ್ಗಳು ಪದಕ ಸುತ್ತಿಗೆ ಲಗ್ಗೆ
ಬ್ಯಾಂಕಾಕ್, ಎ.24: ಏಷ್ಯನ್ ಯೂತ್ ಚಾಂಪಿಯನ್ಶಿಪ್ನಲ್ಲಿ ಭಾರತ ಪುರುಷ ಬಾಕ್ಸರ್ಗಳು ಮಿಶ್ರ ಫಲಿತಾಂಶ ಪಡೆದಿದ್ದಾರೆ. ಮೂವರು ಪದಕ ಸುತ್ತಿಗೆ ಪ್ರವೇಶಿಸಿ ಯೂತ್ ಒಲಿಂಪಿಕ್ಸ್ಗೆ ತೇರ್ಗಡೆಯಾಗಿದ್ದಾರೆ. ಇತರ ಆರು ಬಾಕ್ಸರ್ಗಳು ಕ್ವಾರ್ಟರ್ ಫೈನಲ್ನಲ್ಲಿ ಸೋತಿದ್ದಾರೆ. ಅಂಕಿತ್ ಖತಾನಾ(60ಕೆಜಿ), ಭಾವೇಶ್ ಕಟ್ಟಿಮನಿ ಕುಮಾರ್(52ಕೆಜಿ) ಹಾಗೂ ಅಮಾನ್(+91ಕೆಜಿ) ಸೆಮಿಫೈನಲ್ಗೆ ತಲುಪಿದ್ದು, ಈ ವರ್ಷಾಂತ್ಯದಲ್ಲಿ ಅರ್ಜೆಂಟೀನದಲ್ಲಿ ನಡೆಯುವ ಯೂತ್ ಒಲಿಂಪಿಕ್ಸ್ನಲ್ಲಿ ಸ್ಥಾನ ಪಡೆದರು. ಬರುನ್ ಸಿಂಗ್(49ಕೆಜಿ), ಹಿಮ್ಮತ್ ಸಿಂಗ್(91ಕೆಜಿ), ಆಕಾಶ್ ಕುಮಾರ್(64ಕೆಜಿ), ಆಕಾಶ್ ಕುಮಾರ್(56ಕೆಜಿ), ವಿಜಯದೀಪ್ ದುಹಾನ್(69ಕೆಜಿ) ಹಾಗೂ ರೊನಕ್(81ಕೆಜಿ) ಸೋತಿದ್ದಾರೆ.
Next Story