ಕುವೈತ್ ತೊರೆಯುವಂತೆ ಫಿಲಿಪ್ಪೀನ್ಸ್ ರಾಯಭಾರಿಗೆ ಸೂಚನೆ
ಕುವೈತ್ ಸಿಟಿ, ಎ. 26: ಫಿಲಿಪ್ಪೀನ್ಸ್ ರಾಯಭಾರಿಯನ್ನು ‘ಅನಪೇಕ್ಷಿತ ವ್ಯಕ್ತಿ’ ಎಂದು ಘೋಷಿಸಲಾಗಿದ್ದು, ಒಂದು ವಾರದಲ್ಲಿ ದೇಶ ತೊರೆಯುವಂತೆ ಅವರಿಗೆ ಸೂಚಿಸಲಾಗಿದೆ ಎಂದು ಕುವೈತ್ ವಿದೇಶ ಸಚಿವಾಲಯ ಬುಧವಾರ ತಿಳಿಸಿದೆ.
ಕುವೈತ್ನ ಮನೆಗಳಿಂದ ಇಬ್ಬರು ಫಿಲಿಪ್ಪೀನ್ಸ್ ಮನೆಗೆಲಸದ ಮಹಿಳೆಯರನ್ನು ವಾಪಸ್ ಕಳುಹಿಸಿದ ಘಟನೆಗೆ ಸಂಬಂಧಿಸಿದಂತೆ ಈ ಬೆಳವಣಿಗೆ ಸಂಬಂಧಿಸಿದೆ.
ಅದೇ ವೇಳೆ, ಫಿಲಿಪ್ಪೀನ್ಸ್ಗೆ ಕುವೈತ್ ರಾಯಭಾರಿಯನ್ನು ಸಮಾಲೋಚನೆಗಾಗಿ ಕುವೈತ್ ವಾಪಸ್ ಕರೆಸಿಕೊಂಡಿದೆ.
Next Story