ಮೆಡಿಟರೇನಿಯನ್ ಸಮುದ್ರದಲ್ಲಿ ಮುಳುಗಿ 5 ವಲಸಿಗರ ಸಾವು
ಮ್ಯಾಡ್ರಿಡ್, ಎ. 26: ಮೆಡಿಟರೇನಿಯನ್ ಸಮುದ್ರವನ್ನು ದಾಟಲು ಯತ್ನಿಸುತ್ತಿದ್ದ ವಲಸಿಗರ ಪೈಕಿ ಐವರು ಮೊರೊಕ್ಕೊ ಕರಾವಳಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಸ್ಪೇನ್ನ ತಟ ರಕ್ಷಣಾ ಪಡೆ ಗುರುವಾರ ತಿಳಿಸಿದೆ.
ಅದೇ ವೇಳೆ, ಪಡೆಯು 54 ಮಂದಿಯನ್ನು ರಕ್ಷಿಸಿದೆ.
ಇನ್ನೆರಡು ದೋಣಿಗಳಲ್ಲಿದ್ದ ವಲಸಿಗರಿಗಾಗಿ ಅದು ಶೋಧ ಕಾರ್ಯಾಚರಣೆ ನಡೆಸುತ್ತಿದ್ದು, ಕೆಟ್ಟ ಹವಾಮಾನದಿಂದಾಗಿ ಹಿನ್ನಡೆಯಾಗಿದೆ.
Next Story