ಬಾಲಿವುಡ್ಗೆ ಪ್ರೇಮಂ
‘ಪ್ರೇಮಂ’ ಮಲಯಾಳಂ ಚಿತ್ರರಂಗದಲ್ಲೇ ಹೊಸ ಟ್ರೆಂಡ್ ಸೃಷ್ಟಿಸಿದ ಸಿನೆಮಾ. 2015ರಲ್ಲಿ ತೆರೆಕಂಡ ಪ್ರೇಮಂನಲ್ಲಿ ನಿವಿನ್ ಪೌಲಿ ನಾಯಕನಾಗಿ ನಟಿಸಿದ್ದರು. ಬಾಕ್ಸ್ಆಫೀಸ್ನಲ್ಲಿ ಭರ್ಜರಿ ಯಶಸ್ಸು ಕಂಡ ಈ ಚಿತ್ರ ಈಗ ಬಾಲಿವುಡ್ಗೆ ರಿಮೇಕ್ ಆಗುತ್ತಿದೆ. ಸೈಫ್ ಅಲಿ ಖಾನ್ ಪುತ್ರಿ ಸಾರಾ ಆಲಿಖಾನ್ ನಾಯಕಿಯಾಗಿ ನಟಿಸುತ್ತಿರುವ ಕೇದಾರ್ನಾಥ್ ಚಿತ್ರದ ನಿರ್ದೇಶಕ ಅಭಿಷೇಕ್ ಕಪೂರ್, ಪ್ರೇಮಂನ್ನು ಬಾಲಿವುಡ್ಗೆ ತರುತ್ತಿದ್ದಾರೆ. ಮಲಯಾಳಂನಲ್ಲಿ ನಿವಿನ್ ಪೌಲಿಯ ಜಾರ್ಜ್ ಪಾತ್ರವನ್ನು, ಹಿಂದಿಯಲ್ಲಿ ಬಾಲಿವುಡ್ನ ಯುವನಟ ಅರ್ಜುನ್ ಕಪೂರ್ ನಿರ್ವಹಿಸಲಿದ್ದಾರೆ. ಈ ಚಿತ್ರಕ್ಕೆ ಮೂವರು ನಾಯಕಿಯರಿರಲಿದ್ದು,ಅವರ್ಯಾರೆಂದು ಇನ್ನೂ ತೀರ್ಮಾನವಾಗಿಲ್ಲವಂತೆ.
ಕೇದಾರ್ನಾಥ್ ಚಿತ್ರದ ಕೆಲಸವನ್ನು ಪೂರ್ತಿಗೊಳಿಸುತ್ತಿರುವ ಮಧ್ಯೆಯೇ ನಿರ್ದೇಶಕ ಅಭಿಷೇಕ್ ಕಪೂರ್ ಬಾಲಿವುಡ್ನ ಪ್ರೇಮಂನ ಚಿತ್ರಕಥೆ ತಯಾರಿಕೆಯಲ್ಲಿ ಬ್ಯುಸಿಯಾಗಿದ್ದಾರೆ. ಪ್ರೇಮಂ ಚಿತ್ರದ ರಿಮೇಕ್ ಆಗಿದ್ದರೂ, ಬಾಲಿವುಡ್ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ನಿರ್ದೇಶಕ ಅಭಿಷೇಕ್ ಕಪೂರ್ ಚಿತ್ರದ ಕಥೆಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಲಿದ್ದಾರಂತೆ.