varthabharthi

ಸಿನಿಮಾ

ಐಶ್ವರ್ಯಾಗೆ ಕಾರ್ತಿಕ್ ಆರ್ಯನ್ ನಾಯಕ

ವಾರ್ತಾ ಭಾರತಿ : 12 May, 2018

ಯಾವುದೇ ಅಬ್ಬರದ ಪ್ರಚಾರವಿಲ್ಲದೆ ಬಿಡುಗಡೆಗೊಂಡು, ಬಾಕ್ಸ್‌ಆಫೀಸ್‌ನಲ್ಲಿ ಭರ್ಜರಿ ಗೆಲುವು ದಾಖಲಿಸಿದ ಸೋನು ಕೆ ಟೀಟು ಕಿ ಸ್ವೀಟಿ, ಚಿತ್ರದ ನಾಯಕ ಕಾರ್ತಿಕ್ ಆರ್ಯನ್‌ಗೆ ಈಗ ಬಾಲಿವುಡ್‌ನಲ್ಲಿ ಇನ್ನಿಲ್ಲದ ಬೇಡಿಕೆ ಶುರುವಾಗಿದೆ. ಈಗಾಗಲೇ ಅವರು ಕರಣ್‌ಜೋಹರ್‌ರ ಪ್ರತಿಷ್ಠಿತ ಧರ್ಮ ಪ್ರೊಡಕ್ಷನ್ಸ್ ಬ್ಯಾನರ್‌ನಡಿ ನಿರ್ಮಾಣಗೊಳ್ಳಲಿರುವ ಮೂರು ಚಿತ್ರಗಳಲ್ಲಿ ನಟಿಸಲು ಸಹಿಹಾಕಿದ್ದಾರೆ. ಇದರ ಬೆನ್ನಲ್ಲೇ ಬಾಲಿವುಡ್‌ನ ಜನಪ್ರಿಯ ನಟಿ ಐಶ್ವರ್ಯಾ ರೈ ಬಚ್ಚನ್ ಜೊತೆಗೆ ಚಿತ್ರವೊಂದರಲ್ಲಿ ನಟಿಸುವ ಆಫರ್ ಕೂಡಾ ಬಂದಿದೆ.

ಐಶ್ವರ್ಯಾ ನಾಯಕಿಯಾಗಿರುವ ಈ ಥ್ರಿಲ್ಲರ್ ಕಥಾವಸ್ತುವಿರುವ ಚಿತ್ರದ ನಿರ್ದೇಶಕ ರೋಹನ್ ಸಿಪ್ಪಿ. ಚಿತ್ರದ ನಾಯಕ ಪಾತ್ರಕ್ಕಾಗಿ ಉದಯೋನ್ಮುಖ ನಟನನ್ನು ತರಲು ಅವರು ಬಯಸಿದ್ದರು. ಚಿತ್ರದ ನಾಯಕ ಪಾತ್ರಕ್ಕೆ ಕಾರ್ತಿಕ್ ಆರ್ಯನ್ ಅತ್ಯಂತ ಸೂಕ್ತವಾಗಿ ಹೊಂದಿಕೊಳ್ಳುತ್ತಾರೆಂದು ಸಿಪ್ಪಿ ಹೇಳಿದ್ದಾರೆ. ಈಗಾಗಲೇ ಅವರು ಕಾರ್ತಿಕ್ ಆರ್ಯನ್ ಜೊತೆ ತನ್ನ ಹೊಸ ಪ್ರಾಜೆಕ್ಟ್ ಬಗ್ಗೆ ಚರ್ಚಿಸಿದ್ದಾರೆ.

ಎಲ್ಲವೂ ಅಂದುಕೊಂಡಂತೆ ನಡೆದಲ್ಲಿ, ಅಕ್ಟೋಬರ್ ವೇಳೆಗೆ ಚಿತ್ರೀಕರಣ ಆರಂಭವಾಗಲಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)