varthabharthi

ಸಿನಿಮಾ

‘ಈಲಾ’ಗೆ ಕಾಜಲ್ ನಾಯಕಿ

ವಾರ್ತಾ ಭಾರತಿ : 12 May, 2018

ಬಾಲಿವುಡ್‌ನಲ್ಲಿ ಒಂದು ಕಾಲದ ಸೂಪರ್‌ಸ್ಟಾರ್ ಎನಿಸಿದ್ದ ಕಾಜಲ್ ವಿವಾಹದ ಬಳಿಕ ಬೆರಳೆಣಿಕೆಯಷ್ಟು ಚಿತ್ರಗಳಲ್ಲಿ ಮಾತ್ರವೇ ನಟಿಸಿದ್ದಾರೆ. ಕಳೆದ ವರ್ಷ ಧನುಷ್ ಜೊತೆಗೆ ‘ವೇಲೈ ಇಲ್ಲಾದ ಪಟ್ಟಾದಾರಿ -2’ನಲ್ಲಿ ಅಭಿನಯಿಸಿದ್ದ ಕಾಜಲ್ ಇದೀಗ ತನ್ನದೇ ಹೋಂ ಪ್ರೊಡಕ್ಷನ್‌ನಲ್ಲಿ ನಿರ್ಮಾಣಗೊಳ್ಳಲಿರುವ ಚಿತ್ರದಲ್ಲಿ ನಟಿಸಲು ಸಜ್ಜಾ ಗುತ್ತಿದ್ದಾರೆ.ಪತಿ ಅಜಯ್‌ದೇವಗನ್ ನಿರ್ಮಿಸಲಿರುವ ಈಲಾ ಚಿತ್ರಕ್ಕೆ ಕಾಜಲ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಪ್ರದೀಪ್ ಸರ್ಕಾರ್ ನಿರ್ದೇಶನದ ಈಲಾ, ಖ್ಯಾತ ನಾಟಕಕಾರ ಆನಂದಗಾಂಧಿಯವರ ಗುಜರಾತಿ ನಾಟಕ ‘ಬೇಟಾ ಕಾಗ್ಡೂ’ವನ್ನು ಆಧರಿಸಿದೆ. ಈ ಚಿತ್ರದಲ್ಲಿ ಕಾಜಲ್‌ಹಲವು ಅಡೆತಡೆಗಳನ್ನು ಎದುರಿಸಿಯೂ ಯಶಸ್ವಿ ಗಾಯಕಿಯಾಗುವ, ಸಿಂಗಲ್ ಮದರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಸಾಮಾನ್ಯವಾಗಿ ದಿನಕ್ಕೆ ಎಂಟು ತಾಸುಗಳಿಗಿಂತ ಹೆಚ್ಚು ಹೊತ್ತು ಶೂಟಿಂಗ್‌ನಲ್ಲಿ ಪಾಲ್ಗೊಳ್ಳುವುದಿಲ್ಲವೆಂಬ ಕಟ್ಟುನಿಟ್ಟಿನ ನಿಯಮವನ್ನು ಕಾಜಲ್ ಪಾಲಿಸಿಕೊಂಡು ಬರುತ್ತಿದ್ದಾರೆ. ಆದರೆ ಇದು ಹೋಂ ಬ್ಯಾನರ್‌ನ ಚಿತ್ರವಾಗಿರುವುದರಿಂದ ಅವರು ದಿನದ ಲ್ಲಿ 14 ತಾಸುಗಳವರೆಗೂ ಎಡೆಬಿಡದೆ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದಾರಂತೆ. ಇನ್ನೂ ಹೆಸರಿಡದ ಈ ಚಿತ್ರ ತನ್ನ ಚಿತ್ರಬದುಕಿನಲ್ಲಿ ಹೊಸ ಮೈಲುಗಲ್ಲಾಗಲಿದೆಯೆಂಬ ಭರವಸೆಯನ್ನು ಕಾಜಲ್ ಹೊಂದಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)