varthabharthi

ರಾಷ್ಟ್ರೀಯ

ಕೇಂದ್ರ ಸಂಪುಟ ಪುನರ್ ರಚನೆ

ರಾಥೋಡ್‌ ನೂತನ ಕೇಂದ್ರ ವಾರ್ತಾ ಸಚಿವ, ಸ್ಮೃತಿ ಇರಾನಿಗೆ ಜವಳಿ ಮಾತ್ರ

ವಾರ್ತಾ ಭಾರತಿ : 14 May, 2018

ಹೊಸದಿಲ್ಲಿ, ಮೇ 15: ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಳ್ಳುವ ಮುನ್ನಾ ದಿನವಾಗಿರುವ ಸೋಮವಾರ ಕೇಂದ್ರ ಸಚಿವ ಸಂಪುಟದಲ್ಲಿ ಕೆಲವು ಸಚಿವರ ಖಾತೆ ಬದಲಾವಣೆಯಾಗಿದ್ದು, ಕ್ರೀಡಾ ಸಚಿವರಾಗಿದ್ದ ರಾಜ್ಯವರ್ಧನ ರಾಥೋಡ್ ನೂತನ ವಾರ್ತಾ ಮತ್ತು ಪ್ರಚಾರ ಖಾತೆ ಸಚಿವರಾಗಿ ನೇಮಕಗೊಂಡಿದ್ದಾರೆ.

 ಸ್ಮೃತಿ ಇರಾನೀ ಹಿಂದೆ ವಾರ್ತಾ ಸಚಿವರಾಗಿದ್ದರು. ಅವರ ಕೈಯಲ್ಲಿದ್ದ ವಾರ್ತಾ ಸಚಿವೆ ಖಾತೆಯೆನ್ನು ಹಿಂಪಡೆಯಲಾಗಿದೆ.ಅವರಿಗೆ ಜವಳಿ ಖಾತೆ ಸಿಕ್ಕಿದೆ. ಈ ಹಿಂದೆ ಅವರನ್ನು ಎಚ್‌ಆರ್‌ಡಿ ಖಾತೆಯಿಂದ ಕೆಳಗಿಳಿಸಲಾಗಿತ್ತು. ಪ್ರಕಾಶ್ ಜಾವೆಡ್ಕರ್ ಕೈಗೆ ಎಚ್‌ಆರ್‌ಡಿ ಖಾತೆ ನೀಡಲಾಗಿತ್ತು.

 ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯಲ್ ಅವರಿಗೆ ಹಣಕಾಸು ಖಾತೆಯ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ. ಹಣಕಾಸು ಸಚಿವ ಅರುಣ್ ಜೇಟ್ಲಿಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಗೋಯಲ್‌ಗೆ ಹೆಚ್ಚುವರಿ ಹಣಕಾಸು ಜವಾಬ್ದಾರಿ ನೀಡಲಾಗಿದೆ.

ಎಸ್‌ಎಸ್ ಅಹ್ಲುವಾಲಿಯಾಗೆ ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ಖಾತೆಯ ಜವಾಬ್ದಾರಿಯನ್ನು ನೀಡಲಾಗಿದೆ. ಸಚಿವ ಕೆ.ಜೆ. ಅಲ್ಫೋನ್ಸ್ ರನ್ನು  ಈ ಖಾತೆಯಿಂದ ತೆರವುಗೊಳಿಸಲಾಗಿದೆ.  ಅವರಿಗೆ ಪ್ರವಾಸೋದ್ಯಮ ಖಾತೆಯ ಜವಾಬ್ದಾರಿ ನೀಡಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)