varthabharthi

ಬೆಂಗಳೂರು

ಪೋಸ್ಟ್ ಮಾಡಿ ಡಿಲಿಟ್ ಮಾಡಿದ ಬಿಜೆಪಿ ನಾಯಕ

ಬಿಎಸ್‌ವೈ ಪ್ರಮಾಣ ವಚನಕ್ಕೆ ಸುರೇಶ್‌ಕುಮಾರ್ ಆಹ್ವಾನ

ವಾರ್ತಾ ಭಾರತಿ : 16 May, 2018
Varthabharathi

ಬೆಂಗಳೂರು, ಮೇ 16: ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಗುರುವಾರ ಬೆಳಗ್ಗೆ 9.30ಕ್ಕೆ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ರಾಜಾಜಿನಗರ ಕ್ಷೇತ್ರದ ಶಾಸಕ ಎಸ್.ಸುರೇಶ್‌ಕುಮಾರ್ ತಮ್ಮ ಫೇಸ್‌ಬುಕ್ ಹಾಗೂ ಟ್ವಿಟರ್‌ನಲ್ಲಿ ಜನತೆಗೆ ಆಹ್ವಾನ ನೀಡಿದ್ದಾರೆ.

ರಾಜಭವನದಿಂದ ಅಧಿಕೃತವಾಗಿ ಯಾವುದೇ ಆಹ್ವಾನ ಲಭ್ಯವಾಗದೆ ಇದ್ದರೂ ಸುರೇಶ್‌ಕುಮಾರ್ ಈ ಆಹ್ವಾನವನ್ನು ಹಾಕಿದ್ದರು. ಅದರ ಬೆನ್ನಲ್ಲೆ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿಯೂ ತಮ್ಮ ಟ್ವಿಟರ್ ಖಾತೆಯಲ್ಲಿ ಅದೇ ಸಂದೇಶವನ್ನು ಹಾಕಿದ್ದರು. ಆದರೆ, ಕೆಲವೇ ನಿಮಿಷಗಳಲ್ಲಿ ಸುರೇಶ್‌ಕುಮಾರ್ ಫೇಸ್‌ಬುಕ್ ಮತ್ತು ಟ್ವೀಟರ್ ಖಾತೆಯಿಂದ ತಮ್ಮ ಸಂದೇಶವನ್ನು ಅಳಿಸಿ ಹಾಕಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

 

Comments (Click here to Expand)