varthabharthi

ಅಂತಾರಾಷ್ಟ್ರೀಯ

ಮೃತನ ಕುಟುಂಬಕ್ಕೆ ಪರಿಹಾರ ನೀಡಿದ ಬಳಿಕ ಅಮೆರಿಕ ರಾಜತಾಂತ್ರಿಕ ವಾಪಸ್

ವಾರ್ತಾ ಭಾರತಿ : 16 May, 2018

ಇಸ್ಲಾಮಾಬಾದ್, ಮೇ 16: ಇಸ್ಲಾಮಾಬಾದ್‌ನಲ್ಲಿ ರಸ್ತೆ ಅಪಘಾತವೊಂದರಲ್ಲಿ ಮೋಟರ್ ಸೈಕಲ್ ಚಾಲಕನೋರ್ವನ ಸಾವಿಗೆ ಕಾರಣನಾದ ಅಮೆರಿಕ ರಾಜತಾಂತ್ರಿಕರೊಬ್ಬರು ಮೃತನ ಕುಟುಂಬಕ್ಕೆ ಪರಿಹಾರ ನೀಡುವ ಒಪ್ಪಂದವೊಂದಕ್ಕೆ ಬಂದ ಬಳಿಕವಷ್ಟೇ ಅವರಿಗೆ ಅಮೆರಿಕಕ್ಕೆ ತೆರಳಲು ಅನುಮತಿ ನೀಡಲಾಗಿದೆ ಎಂದು ಮಾಧ್ಯಮ ವರದಿಗಳು ಮಂಗಳವಾರ ಹೇಳಿವೆ.

ಅಪಘಾತ ಪ್ರಕರಣದ ಮೊಕದ್ದಮೆಯನ್ನು ನ್ಯಾಯಾಲಯದಲ್ಲಿ ಮುಂದುವರಿಸದಿರುವುದಕ್ಕೆ ಪ್ರತಿಯಾಗಿ ಮೃತ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ನೀಡಲಾಗುವುದು ಎಂದು ಉರ್ದು ದೈನಿಕ ‘ಜಂಗ್’ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.

ಪರಿಹಾರವನ್ನು ಅಮೆರಿಕ ರಾಯಭಾರ ಕಚೇರಿಯು ನೀಡುವುದು. ಆದಾಗ್ಯೂ, ಎಷ್ಟು ಹಣ ಮತ್ತು ಯಾವಾಗ ನೀಡಲಾಗುತ್ತದೆ ಎನ್ನುವುದು ಗೊತ್ತಾಗಿಲ್ಲ.

ಅಮೆರಿಕ ರಾಜತಾಂತ್ರಿಕ ಕರ್ನಲ್ ಜೋಸೆಫ್ ಇಮಾನುಯೆಲ್ ಹಾಲ್ ಎಪ್ರಿಲ್ 7ರಂದು ಸಾರಿಗೆ ನಿಯಮ ಉಲ್ಲಂಘಿಸಿ ಬೈಕೊಂದಕ್ಕೆ ಢಿಕ್ಕಿ ಹೊಡೆದಿದ್ದರು. ಅಪಘಾತದಲ್ಲಿ 22 ವರ್ಷದ ಬೈಕ್ ಸವಾರ ಮೃತಪಟ್ಟಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)