varthabharthi

ಅಂತಾರಾಷ್ಟ್ರೀಯ

ಓರ್ವ ಪೊಲೀಸ್ ಅಧಿಕಾರಿ ಸಾವು

ಇಂಡೋನೇಶ್ಯ: ಪೊಲೀಸರ ಮೇಲೆ ದಾಳಿ ನಡೆಸಿದ ನಾಲ್ವರ ಹತ್ಯೆ

ವಾರ್ತಾ ಭಾರತಿ : 16 May, 2018

ಜಕಾರ್ತ (ಇಂಡೋನೇಶ್ಯ), ಮೇ 16: ಇಂಡೋನೇಶ್ಯದ ಸುಮಾತ್ರದ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಬುಧವಾರ ತಲವಾರು ದಾಳಿ ನಡೆಸಿ ಓರ್ವ ಪೊಲೀಸ್ ಅಧಿಕಾರಿಯನ್ನು ಹತ್ಯೆಗೈದ ನಾಲ್ವರನ್ನು ಪೊಲೀಸರು ಗುಂಡು ಹಾರಿಸಿ ಕೊಂದಿದ್ದಾರೆ.

ದುಷ್ಕರ್ಮಿಗಳು ಮಿನಿ ವ್ಯಾನೊಂದನ್ನು ರಿಯಾವು ಪ್ರಾಂತದ ಪೊಲೀಸ್ ಪ್ರಧಾನ ಕಚೇರಿಗೆ ನುಗ್ಗಿಸಿ ಪೊಲೀಸರ ಮೇಲೆ ದಾಳಿ ನಡೆಸಿದರು ಎಂದು ರಾಷ್ಟ್ರೀಯ ಪೊಲೀಸ್ ವಕ್ತಾರ ಸೆಟ್ಯೊ ವಸಿಸ್ಟೊ ಹೇಳಿದರು.

ದುಷ್ಕರ್ಮಿಗಳ ವಾಹನ ಚಾಲಕನನ್ನು ಬಂಧಿಸಲಾಗಿದೆ. ವ್ಯಾನ್ ಢಿಕ್ಕಿ ಹೊಡೆದ ಪೊಲೀಸ್ ಅಧಿಕಾರಿ ಮೃತಪಟ್ಟಿದ್ದಾರೆ ಹಾಗೂ ಇಬ್ಬರು ಗಾಯಗೊಂಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)