varthabharthi

ಗಲ್ಫ್ ಸುದ್ದಿ

ಸೌದಿ ಅರೇಬಿಯ: ಗುರುವಾರದಿಂದ ರಮಝಾನ್ ಆರಂಭ

ವಾರ್ತಾ ಭಾರತಿ : 16 May, 2018

ಜಿದ್ದಾ, ಮೇ 16: ಸೌದಿ ಅರೇಬಿಯದಲ್ಲಿ ಮಂಗಳವಾರ ರಮಝಾನ್ ಚಂದ್ರದರ್ಶನವಾಗಿಲ್ಲ ಎಂದು ಚಂದ್ರ ವೀಕ್ಷಕರು ಹೇಳಿದ್ದಾರೆ. ಹಾಗಾಗಿ, ಜಗತ್ತಿನಾದ್ಯಂತವಿರುವ ಮುಸ್ಲಿಮರು ಗುರುವಾರದಿಂದ ಪವಿತ್ರ ರಮಝಾನ್ ಮಾಸದ ಉಪವಾಸವನ್ನು ಆಚರಿಸಲಿದ್ದಾರೆ.

ಕೆಟ್ಟ ಹವಾಮಾನದಿಂದಾಗಿ ಚಂದ್ರದರ್ಶನ ಕಠಿಣವಾಗಿದೆ ಎಂದು ಸೌದಿ ಅರೇಬಿಯದ ಸರಕಾರಿ ಟಿವಿ ಹೇಳಿದೆ. ಈ ಬಾರಿಯ ರಮಝಾನನ್ನು ಉತ್ತರ ಗೋಳಾರ್ಧದಲ್ಲಿರುವ ಮುಸ್ಲಿಮರು ಸುದೀರ್ಘ ಬೇಸಿಗೆ ದಿನಗಳಲ್ಲಿ ಆಚರಿಸುತ್ತಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)