varthabharthi

ಕ್ರೀಡೆ

ಐಪಿಎಲ್: ಪಂಜಾಬ್‌ಗೆ 187 ರನ್ ಗುರಿ

ವಾರ್ತಾ ಭಾರತಿ : 16 May, 2018

ಮುಂಬೈ, ಮೇ 16: ಕಿರೊನ್ ಪೊಲಾರ್ಡ್(50) ಅರ್ಧಶತಕದ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಐಪಿಎಲ್‌ನ 50ನೇ ಪಂದ್ಯದ ಗೆಲುವಿಗೆ 187 ರನ್ ಗುರಿ ನೀಡಿದೆ.

ಇಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ಪಂಜಾಬ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಮುಂಬೈ ಪರ ಇನಿಂಗ್ಸ್ ಆರಂಭಿಸಿದ ಸೂರ್ಯಕುಮಾರ್ ಯಾದವ್(27) ಹಾಗೂ ಲೂವಿಸ್(9) ಮೊದಲ ವಿಕೆಟ್‌ಗೆ 37 ರನ್ ಸೇರಿಸಿ ಸಾಧಾರಣ ಆರಂಭ ನೀಡಿದರು. ಕೃನಾಲ್ ಪಾಂಡ್ಯ(32), ಇಶಾನ್ ಕಿಶನ್(20) ಹಾಗೂ ಮೆಕ್ಲಿನಘನ್(ಔಟಾಗದೆ 11) ಎರಡಂಕೆಯ ಸ್ಕೋರ್ ದಾಖಲಿಸಿದರು.

ಪಂಜಾಬ್ ಪರ ಆ್ಯಂಡ್ರೂ ಟೈ(4-16) ಯಶಸ್ವಿ ಬೌಲರ್ ಎನಿಸಿಕೊಂಡರು. ಆರ್.ಅಶ್ವಿನ್(2-18)ಎರಡು ವಿಕೆಟ್ ಪಡೆದಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)