varthabharthi

ರಾಷ್ಟ್ರೀಯ

ಯಡಿಯೂರಪ್ಪರ ಪ್ರಮಾಣ ವಚನ ತಡೆಯಿರಿ : ಸುಪ್ರೀಂ ಕೋರ್ಟ್ ಕದ ತಟ್ಟಿದ ಕಾಂಗ್ರೆಸ್

ವಾರ್ತಾ ಭಾರತಿ : 16 May, 2018
Varthabharathi

ಹೊಸದಿಲ್ಲಿ, ಮೇ.16 :  ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಗುರುವಾರ ಬೆಳಗ್ಗೆ ಪ್ರಮಾಣ ವಚನ ಸ್ವೀಕರಿಸಲು ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಬಿ ಎಸ್ ಯಡಿಯೂರಪ್ಪನವರಿಗೆ ರಾಜ್ಯಪಾಲ ವಜು ಭಾಯ್ ವಾಲಾ ಆಹ್ವಾನ ನೀಡಿರುವ ಬೆನ್ನಿಗೇ , ಈ ಆಹ್ವಾನವನ್ನು ರದ್ದು ಪಡಿಸಬೇಕು ಎಂದು ಕೋರಿ ಕಾಂಗ್ರೆಸ್ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರ ಬಾಗಿಲು ಬಡಿದಿದೆ. 

ರಾಜ್ಯಪಾಲರ ಕ್ರಮವನ್ನು 'ಸಂವಿಧಾನದ ಎನ್ ಕೌಂಟರ್' ಎಂದು ಕರೆದಿರುವ ಕಾಂಗ್ರೆಸ್ ಬುಧವಾರ ತಡರಾತ್ರಿ ವಿಚಾರಣೆ ನಡೆಸಿ ಗುರುವಾರ ನಡೆಯಲಿರುವ ಪ್ರಮಾಣ ವಚನ ಕಾರ್ಯಕ್ರಮವನ್ನು ತಡೆಯಬೇಕು ಎಂದು ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರ ಅವರಲ್ಲಿ ವಿನಂತಿಸಿದೆ. 

ಕಾಂಗ್ರೆಸ್ ವಕ್ತಾರ ಹಾಗು ಸುಪ್ರೀಂ ಕೋರ್ಟ್ ನ್ಯಾಯವಾದಿ ಅಭಿಷೇಕ್ ಮನು ಸಿಂಘ್ವಿ ಮನವಿಯನ್ನು ತಯಾರಿಸಿ ಪಕ್ಷದ ವತಿಯಿಂದ ಸುಪ್ರೀಂ ಕೋರ್ಟ್ ಮೆಟ್ಟಲೇರಿದ್ದಾರೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

 

Comments (Click here to Expand)