ಇಂಗ್ಲೆಂಡ್: ಭಾರತ ಮೂಲದ ಮಹಿಳೆ ಕೊಲೆ
ಲಂಡನ್, ಮೇ 17: ಉತ್ತರ ಇಂಗ್ಲೆಂಡ್ನ ಮಿಡಲ್ಸ್ಬೋರೋ ಪಟ್ಟಣದಲ್ಲಿ ವಾಸಿಸುತ್ತಿರುವ 34 ವರ್ಷದ ಭಾರತ ಮೂಲದ ಮಹಿಳೆಯೊಬ್ಬರು ತನ್ನ ಮನೆಯಲ್ಲಿ ಕೊಲೆಯಾಗಿದ್ದಾರೆ.
ಜೆಸ್ಸಿಕಾ ಪಟೇಲ್ ತನ್ನ 36 ವರ್ಷದ ಗಂಡ ಮಿತೇಶ್ ಜೊತೆಗೆ ಮಿಡಲ್ಸ್ಬೋರೋನಲ್ಲಿ ಔಷಧಿ ಅಂಗಡಿಯೊಂದನ್ನು ನಡೆಸುತ್ತಿದ್ದರು. ಅವರ ದೇಹವು ಸೋಮವಾರ ರಾತ್ರಿ ಮನೆಯಲ್ಲಿ ಪತ್ತೆಯಾಯಿತು.
‘‘ವಿಧಿವಿಜ್ಞಾನ ತಂಡಗಳು ಸೇರಿದಂತೆ ಪರಿಣತ ಅಧಿಕಾರಿಗಳು ಪಟೇಲ್ಗೆ ಏನಾಯಿತು ಎಂಬುದನ್ನು ತಿಳಿಯಲು ತೀವ್ರ ಪ್ರಯತ್ನ ಮಾಡುತ್ತಿದ್ದಾರೆ’’ ಎಂದು ಕ್ಲೀವ್ಲ್ಯಾಂಡ್ ಪೊಲೀಸ್ನ ಹೇಳಿಕೆಯೊಂದು ತಿಳಿಸಿದೆ.
Next Story