ನೀರಜ್ಗೆ ಆರನೇ ಸ್ಥಾನ
ಡೈಮಂಡ್ ಲೀಗ್
ನ್ಯೂಯಾರ್ಕ್, ಮೇ 26: ಭಾರತದ ಅಗ್ರಮಾನ್ಯ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಡೈಮಂಡ್ ಲೀಗ್ ಸರಣಿಯ ಮೂರನೇ ಚರಣದಲ್ಲಿ 80.81 ಮೀ.ದೂರಕ್ಕೆ ಜಾವೆಲಿನ್ ಎಸೆಯುವುದರೊಂದಿಗೆ ಆರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ಏಷ್ಯನ್ ಹಾಗೂ ಕಾಮನ್ವೆಲ್ತ್ ಗೇಮ್ಸ್ ಚಾಂಪಿಯನ್ 20ರ ಹರೆಯದ ಚೋಪ್ರಾ ಕಳೆದ ತಿಂಗಳು ದೋಹಾದಲ್ಲಿ ನಡೆದ ಮೊದಲ ಚರಣದ ಡೈಮಂಡ್ ಲೀಗ್ನಲ್ಲಿ 87.43 ಮೀ.ದೂರಕ್ಕೆ ಜಾವೆಲಿನ್ ಎಸೆದು ನಾಲ್ಕನೇ ಸ್ಥಾನ ಪಡೆದಿದ್ದರು. ನೀರಜ್ ತನ್ನ ಮೊದಲ ಯತ್ನದಲ್ಲಿ 76.95 ಮೀ. ,2ನೇ ಯತ್ನದಲ್ಲಿ 80.81 ಮೀ. ಹಾಗೂ ಮೂರನೇ ಯತ್ನದಲ್ಲಿ 80.26 ಮೀ.ದೂರಕ್ಕೆ ಜಾವೆಲಿನ್ ಎಸೆದಿದ್ದರು. ಆದರೆ ಕೊನೆಯ ಮೂರು ಪ್ರಯತ್ನದಲ್ಲಿ ತಪ್ಪೆಸಗಿದರು. ಜರ್ಮನಿಯ ಅಥ್ಲೀಟ್ಗಳು ಮೊದಲ ಮೂರು ಸ್ಥಾನ ಪಡೆದರು.
Next Story