ಕತರ್: ಕೆಎಂಸಿಎ ವಾರ್ಷಿಕ ಸಭೆ, ನೂತನ ಪದಾಧಿಕಾರಿಗಳ ಆಯ್ಕೆ
ಕತರ್, ಮೇ 30: ಕರ್ನಾಟಕ ಮುಸ್ಲಿಮ್ ಕಲ್ಚರಲ್ ಅಸೋಸಿಯೇಶನ್, ದೋಹಾ ಇದರ ವಾರ್ಷಿಕ ಸಾಮಾನ್ಯ ಸಭೆಯು ಮಾಝಾ ರೆಸ್ಟಾರೆಂಟ್ ನಲ್ಲಿ ಇತ್ತೀಚೆಗೆ ನಡೆಯಿತು.
ಅಧ್ಯಕ್ಷ ಅಬ್ದುಲ್ಲಾ ಮೋನು ಸ್ವಾಗತಿಸಿ, ತನ್ನ ಅಧ್ಯಕ್ಷತೆಯ ಅವಧಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಗಳ ಬಗ್ಗೆ ವಿವರ ನೀಡಿದರು.
ಅಹ್ಮದ್ ಸಯೀದ್ ಅಸ್ಸಾದಿ ಅವರು ಕಿರಾಅತ್ ಪಠಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಧಾನ ಕಾರ್ಯದರ್ಶಿ ಸಾಖಿಬ್ ರಝಾ ಖಾನ್ ವಾರ್ಷಿಕ ವರದಿ ಮಂಡಿಸಿದರು. ಖಜಾಂಜಿ ಫಯಾಝ್ ಅಹ್ಮದ್ ಹಣಕಾಸು ವರದಿ ಮಂಡಿಸಿದರು.
ಈ ಸಂದರ್ಭ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಅಧ್ಯಕ್ಷರಾಗಿ ಇಬ್ರೈಝ್ ಖಾನ್, ಉಪಾಧ್ಯಕ್ಷರಾಗಿ ಇಕ್ಬಾಲ್ ಮನ್ನಾ, ಪ್ರಧಾನ ಕಾರ್ಯದರ್ಶಿಯಾಗಿ ಖಲೀಲ್ ಅಹ್ಮದ್, ಉಪ ಕಾರ್ಯದರ್ಶಿಯಾಗಿ ಝಾಕಿರ್ ಅಹ್ಮದ್, ಖಜಾಂಚಿಯಾಗಿ ಖಲೀಲ್ ಅಹ್ಮದ್, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಇಸ್ಮಾಯೀಲ್ ಅಬೂಬಕರ್, ಕ್ರೀಡಾ ಕಾರ್ಯದರ್ಶಿಯಾಗಿ ಶಕೀಲ್ ಅಹ್ಮದ್, ಸಲಹಾ ಅಧ್ಯಕ್ಷರಾಗಿ ಅಬ್ದುಲ್ಲಾ ಮೋನು ಮೊಯ್ದಿನ್, ಆಂತರಿಕ ಲೆಕ್ಕ ಪರಿಶೋಧಕರಾಗಿ ಫಯಾಝ್ ಅಹ್ಮದ್ ಆಯ್ಕೆಯಾದರು.