ಸೌದಿ: ನೂತನ ಸಂಸ್ಕೃತಿ ಸಚಿವಾಲಯ ರಚನೆ
ಜಿದ್ದಾ (ಸೌದಿ ಅರೇಬಿಯ), ಜೂ. 2: ಸೌದಿ ಅರೇಬಿಯದಲ್ಲಿ ಹೊಸದಾಗಿ ಸಂಸ್ಕೃತಿ ಸಚಿವಾಲಯವೊಂದನ್ನು ಸೃಷ್ಟಿಸಲಾಗಿದೆ.
ರಾಜಕುಮಾರ ಬದ್ರ್ ಬಿನ್ ಅಬ್ದುಲ್ಲಾ ಬಿನ್ ಮುಹಮ್ಮದ್ ಬಿನ್ ಫರ್ಹನ್ ಅಲ್-ಸೌದ್ರನ್ನು ಅದರ ನೂತನ ಸಚಿವರನ್ನಾಗಿ ನೇಮಿಸಲಾಗಿದೆ ಎಂದು ಶನಿವಾರ ಪ್ರಸಾರಗೊಂಡ ರಾಜಾಜ್ಞೆಯೊಂದು ತಿಳಿಸಿದೆ.
ರಾಜಕುಮಾರ ಬದ್ರ್ ಅಲ್-ಉಲಾ ರಾಜ ಆಯೋಗದ ಗವರ್ನರ್ ಆಗಿದ್ದಾರೆ.
ಈವರೆಗೆ ಅಸ್ತಿತ್ವದಲ್ಲಿದ್ದ ಸಂಸ್ಕೃತಿ ಮತ್ತು ವಾರ್ತಾ ಸಚಿವಾಲಯವನ್ನು ವಾರ್ತಾ ಸಚಿವಾಲಯ ಎಂಬುದಾಗಿ ಮರುನಾಮಕರಣ ಮಾಡಲಾಗಿದೆ.
Next Story