15 ಪ್ರಭಾವಿ ಪಾಸ್ಪೋರ್ಟ್ಗಳ ಪಟ್ಟಿಯಲ್ಲಿ ಯುಎಇ
ದುಬೈ, ಜೂ. 3: ಯುಎಇ ಪ್ರಜೆಗಳ ವೀಸಾರಹಿತ ಪ್ರವೇಶಕ್ಕೆ ಇನ್ನೂ ಮೂರು ದೇಶಗಳು ಅವಕಾಶ ನೀಡಿದ ಬಳಿಕ, ಯುಎಇಯ ಪಾಸ್ಪೋರ್ಟ್ ಜಗತ್ತಿನ 15 ಅತ್ಯಂತ ಪ್ರಭಾವಿ ಪಾಸ್ಪೋರ್ಟ್ಗಳ ಸಾಲಿಗೆ ಸೇರಿದೆ.
ಯುಎಇ ಪ್ರಜೆಗಳು ಕೆನಡ ಪ್ರವೇಶಿಸಲು ಜೂನ್ 5ರಿಂದ ವೀಸಾ ಹೊಂದುವ ಅಗತ್ಯವಿಲ್ಲ. ಅದೇ ವೇಳೆ, ವೀಸಾರಹಿತ ಪ್ರವೇಶ ನೀಡಲು ಬ್ರೆಝಿಲ್ ಮತ್ತು ಗಯಾನ ದೇಶಗಳೂ ಮುಂದೆ ಬಂದಿವೆ.
ಇದರೊಂದಿಗೆ ಯುಎಇಯ ವೀಸಾಮುಕ್ತ ಅಂಕ ಜೂನ್ ಆರಂಭದ ವೇಳೆಗೆ 151ಕ್ಕೇರಿದೆ. ಇದರೊಂದಿಗೆ ‘ಆರ್ಟನ್ ಕ್ಯಾಪಿಟಲ್ಸ್ ಪಾಸ್ಪೋರ್ಟ್ ಸೂಚ್ಯಂಕ’ದಲ್ಲಿ ಯುಎಇಯ ಸ್ಥಾನ 14ಕ್ಕೇರಿದೆ. ಅದು 14ನೇ ಸ್ಥಾನವನ್ನು ಸೈಪ್ರಸ್ ಮತ್ತು ಬ್ರೆಝಿಲ್ನೊಂದಿಗೆ ಹಂಚಿಕೊಂಡಿದೆ.
Next Story