varthabharthi

ಈ ದಿನ

ಎಟಿಎಮ್ ಆವಿಷ್ಕಾರ

ವಾರ್ತಾ ಭಾರತಿ : 3 Jun, 2018

1892: ತೈಲ ಟ್ಯಾಂಕ್‌ವೊಂದು ಸ್ಫೋಟಗೊಂಡು ಅಮೆರಿಕದ ಪೆನ್ಸಿಲ್ವೇನಿಯಾದಲ್ಲಿ 130 ಜನ ಮೃತಪಟ್ಟ ವರದಿಯಾಗಿದೆ.

1928: ಚೀನಾ ಗಣರಾಜ್ಯದ ಅಧ್ಯಕ್ಷ ಝಾಂಗ್ ಝುವೊಲಿನ್ ಜಪಾನಿ ಸೈನಿರಿಂದ ಹತ್ಯೆಗೈಯಲ್ಪಟ್ಟರು.

1945: ಎರಡನೇ ವಿಶ್ವ ಮಹಾಯುದ್ಧದಲ್ಲಿ ವಶಪಡಿಸಿಕೊಂಡ ಜರ್ಮನ್ ಪ್ರದೇಶವನ್ನು ಹಂಚಿಕೊಳ್ಳಲು ಅಮೆರಿಕ, ಸೋವಿಯತ್ ರಶ್ಯಾ, ಬ್ರಿಟನ್ ಹಾಗೂ ಫ್ರಾನ್ಸ್ ಒಪ್ಪಂದ ಮಾಡಿಕೊಂಡವು.

1964: ಮಾಲ್ಡೀವ್ಸ್‌ನಿಂದ ಸಂವಿಧಾನ ಅಂಗೀಕಾರ.

1966: ಹೊಂಡುರಾಸ್ ದೇಶದಲ್ಲಿ ಬೀಸಿದ ಅಲ್ಮಾ ಎಂಬ ಚಂಡಮಾರುತಕ್ಕೆ 51 ಜನ ಬಲಿಯಾದ ವರದಿಯಾಗಿದೆ.

1973: ಆಟೊಮ್ಯಾಟಿಕ್ ಟೆಲ್ಲರ್ ಮಶೀನ್(ಎಟಿಎಮ್) ಆವಿಷ್ಕರಿಸಿದ ವಿಜ್ಞಾನಿಗಳಾದ ಡಾನ್ ವೆಟ್ಝೆಲ್, ಟಾಮ್ ಬರ್ನೆಸ್ ಹಾಗೂ ಜಾರ್ಜ್ ಚಾಸ್ಟೇನ್‌ಗೆ ಹಕ್ಕುಸ್ವಾಮ್ಯ ನೀಡಲಾಯಿತು.

1989: ಚೀನಾದ ಟೈನಾನ್ಮೆನ್ ಸ್ಕ್ವೇರ್‌ನಲ್ಲಿ ವಿದ್ಯಾರ್ಥಿ ಗಳು ನಡೆಸುತ್ತಿದ್ದ ಪ್ರತಿಭಟನೆಯನ್ನು ಚೀನಾದ ಸೈನಿಕರು ಹಿಂಸಾತ್ಮಕವಾಗಿ ಚದುರಿಸಿದರು. ಈ ಸಂದರ್ಭದಲ್ಲಿ 1,000 ವಿದ್ಯಾರ್ಥಿಗಳು ಹಿಂಸೆಯಲ್ಲಿ ಮೃತಪಟ್ಟರೆಂದು ವರದಿಯಾಗಿದೆ.

2001: ರಾಜಮನೆತನದಲ್ಲಿ ನಡೆದ ಮಹಾ ದುರಂತದ ನಂತರ ನೇಪಾಳದ ಕೊನೆಯ ಅರಸು ಜ್ಞಾನೇಂದ್ರ ನೇಪಾಳದ ರಾಜ ಸಿಂಹಾಸನವನ್ನೇರಿದನು.

2012: ಇರಾಕ್‌ನ ಕೇಂದ್ರ ಬಾಗ್ದಾದ್‌ನಲ್ಲಿ ನಡೆದ ಕಾರ್ ಬಾಂಬ್ ಸ್ಫೋಟದಲ್ಲಿ 26 ಜನ ಸಾವಿಗೀಡಾಗಿ, ಸುಮಾರು 190 ಜನ ಗಾಯಗೊಂಡ ಘಟನೆ ವರದಿಯಾಗಿದೆ.

1936: ಖ್ಯಾತ ಬಾಲಿವುಡ್ ನಟಿ ನೂತನ್ ಜನ್ಮದಿನ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)