ಇವಿಎಂ ವಿರುದ್ಧದ ಅಳಲಿಗೆ ಬೆಲೆಯಿಲ್ಲವೇ?
ಮಾನ್ಯರೇ,
ಜಗತ್ತಿನಲ್ಲಿ ಅತಿ ಹೆಚ್ಚು ವಜ್ರದ ಗಣಿಗಳನ್ನು ಹೊಂದಿರುವ ಬೋಟ್ಸವಾನಾ ದಕ್ಷಿಣ ಆಫ್ರಿಕಾದಲ್ಲಿಯ ಪುಟ್ಟ ದೇಶ. ಭಾರತದಿಂದ ಆಮದು ಮಾಡಿಕೊಳ್ಳಲಾದ ಇವಿಎಂ ಮೂಲಕ ಕೆಲವು ತಿಂಗಳ ಹಿಂದೆ ಅಲ್ಲಿಯ ಸರಕಾರ ಚುನಾವಣೆ ನಡೆಸಿತ್ತು ಹಾಗೂ ಆಡಳಿತ ಪಕ್ಷವಾದ ಬೋಟ್ಸವಾನಾ ಡೆಮೊಕ್ರಟಿಕ್ ಪಾರ್ಟಿ (ಬಿಡಿಪಿ) ಭಾರೀ ಅಂತರದಿಂದ ಗೆದ್ದಿತ್ತು (ಬಿಡಿಪಿ ಮತ್ತು ಬಿಜೆಪಿ ಇವುಗಳ ಸಾಮ್ಯತೆ ಗಮನಿಸಿ). ಆದರೆ ಅಲ್ಲಿಯೂ ಪ್ರತಿಪಕ್ಷವು ಆಡಳಿತಾರೂಢ ಬಿಡಿಪಿ ಪಕ್ಷದ ಮೇಲೆ ಇವಿಎಂ ತಿರುಚಿ ಗೆದ್ದಿರುವ ಆರೋಪ ಹೊರಿಸಿ ಕೋರ್ಟಿಗೆ ಹೋಗಿತ್ತು. ಹಾಗಾಗಿ ಅಲ್ಲಿಯ ಕೋರ್ಟಿನ ಆದೇಶದಂತೆ ಅಲ್ಲಿಯ ಚುನಾವಣಾ ಆಯೋಗ ಯಾವುದೇ ಹೆಚ್ಚು ನಖರಾ ಮಾಡದೇ ವಿವಿಪ್ಯಾಟ್ನಲ್ಲಿ ಬಿದ್ದಿರುವ ಮತ ಚೀಟಿ ಎಣಿಸಿತಂತೆ. ಆಘಾತಕರ ವಿಷಯವೆಂದರೆ ಬೋಟ್ಸವಾನಾದಲ್ಲಿ ಇವಿಎಂ ಮತ್ತು ವಿವಿಪ್ಯಾಟ್ನಲ್ಲಿ ಸಿಕ್ಕ ಪ್ರತ್ಯೇಕ ಫಲಿತಾಂಶಗಳಲ್ಲಿ ಭಾರೀ ಅಂತರವಿತ್ತು. ವಿವಿಪ್ಯಾಟ್ ಎಣಿಸಿದಾಗ ಗೆದ್ದ ಪಕ್ಷ ಸೋತಿತ್ತು ಮತ್ತು ಸೋತ ಪಕ್ಷ ಗೆದ್ದಿತ್ತು. ಇದು ಭಾರತವೇ ವಿದೇಶೀಯ ರಾಷ್ಟ್ರವೊಂದಕ್ಕೆ ಪೂರೈಸಿದ ಇವಿಎಂ ಮತ್ತು ವಿವಿಪ್ಯಾಟ್ಗಳ ಮಹಿಮೆ. ಹೀಗೆ ವಿದೇಶದಲ್ಲಿಯೂ ಭಾರತದ ಇವಿಎಂಗಳೇ ಭಾರತದ ಮಾನ ಕಳೆದಿವೆ. ಇಷ್ಟೆಲ್ಲಾ ಆದರೂ ಭಾರತದಲ್ಲಿ ಮಾತ್ರ ನಮ್ಮ ಚುನಾವಣಾ ಆಯೋಗ ಇವಿಎಂನಲ್ಲಿ ಭಾರೀ ಅನ್ಯಾಯವಾಗಿದೆ ಎಂದು ಶಂಕೆಯಿರುವ ಮಂಗಳೂರಿನಲ್ಲಿ ವಿವಿಪ್ಯಾಟ್ ಮತಚೀಟಿ ಎಣಿಸಲು ಸಹಕಾರ ಕೊಡುತ್ತಿಲ್ಲ ಎಂಬುದೇ ದೊಡ್ಡ ವಿಪರ್ಯಾಸ.