varthabharthi

ಸಿನಿಮಾ

ಬಾಕ್ಸ್ ಆಫೀಸ್‌ನಲ್ಲಿ ಮಿಂಚಿದ ವೀರೆ ದಿ ವೆಡ್ಡಿಂಗ್

ವಾರ್ತಾ ಭಾರತಿ : 9 Jun, 2018
Varthabharathi

ಪ್ರೇಕ್ಷಕರನ್ನು ದೀರ್ಘಸಮಯದವರೆಗೆ ಕಾಯುವಂತೆ ಮಾಡಿದ್ದ ‘ವೀರೆ ದಿ ವೆಡ್ಡಿಂಗ್’ ಕೊನೆಗೂ ಕಳೆದ ವಾರ ಬಿಡುಗಡೆಯಾಗಿದೆ. ಲೇಟ್ ಆಗಿ ತೆರೆಕಂಡರೂ, ವೀರೆ ದಿ ವೆಡ್ಡಿಂಗ್ ಪ್ರೇಕ್ಷಕರಿಂದ ಬೆಸ್ಟ್ ಎನಿಸಿಕೊಂಡಿದೆ. ತೆರೆಕಂಡಲ್ಲೆಲ್ಲಾ ಈ ಚಿತ್ರ ಭರ್ಜರಿಯಾಗಿ ಹೌಸ್‌ಫುಲ್ ಪ್ರದರ್ಶನಗಳನ್ನು ಕಾಣುತ್ತಿದೆ. ‘ವೀರೆ ದಿ ವೆಡ್ಡಿಂಗ್’ ಮೂಲಕ ಕರೀನಾ ಕಪೂರ್ ಖಾನ್ ಮತ್ತೆ ಬಾಲಿವುಡ್‌ಗೆ ಮರಳಿದ್ದಾರೆ. ಇಂದಿನ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆಯೂ ಚಿತ್ರವು ಧ್ವನಿಯೆತ್ತಿದೆ. ಶಶಾಂಕ್ ಘೋಷ್ ನಿರ್ದೇಶನದ ಈ ಚಿತ್ರ ನಿರ್ಮಾಪಕರಾದ ಏಕ್ತಾ ಕಪೂರ್, ನಿಖಿಲ್ ದ್ವಿವೇದಿ ಹಾಗೂ ರೇಹಾ ಕಪೂರ್ ಅವರಿಗೆ ಹಣದ ಹೊಳೆಯನ್ನೇ ಹರಿಸಿದೆ. ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲೂ ವೀರ್ ದೆ ವೆಡ್ಡಿಂಗ್ ಬಾಕ್ಸ್ ಆಫೀಸ್ ನಲ್ಲಿ ನಾಗಾಲೋಟದಿಂದ ಓಡುತ್ತಿದೆ.

ಬಿಡುಗಡೆಗೊಂಡ 5 ದಿನಗಳೊಳಗೆ ಈ ಚಿತ್ರ ಭಾರತದಲ್ಲಿ 55.32 ಕೋಟಿ ರೂ. ಬಾಚಿದ್ದು, ಹೊರರಾಷ್ಟ್ರಗಳಲ್ಲಿ 18 ಕೋಟಿ ರೂ. ಕಮಾಯಿಸಿದೆ. ಹೀಗೆ ಒಟ್ಟು 73.32 ಕೋಟಿ ರೂ. ಅದರ ಪಾಲಾಗಿದೆ. ಒಟ್ಟಿನಲ್ಲಿ ವೀರೆ ದಿ ವೆಡ್ಡಿಂಗ್‌ನ ಬಾಕ್ಸ್‌ಆಫೀಸ್ ಓಟವನ್ನು ಕಂಡಾಗ ಅದು ಈ ವರ್ಷದ ಸೂಪರ್ ಹಿಟ್ ಚಿತ್ರಗಳ ಸಾಲಿಗೆ ಸೇರುವುದು ಖಚಿತವಾದಂತಿದೆ.

ನಾಲ್ವರು ಪ್ರಾಣಸ್ನೇಹಿತೆಯರ ಕತೆಹೇಳುವ ವೀರೆ ದಿ ವೆಡ್ಡಿಂಗ್‌ನಲ್ಲಿ ಕರೀನಾ ಕಪೂರ್ ಖಾನ್, ಸೋನಂ ಕಪೂರ್, ಸ್ವರ ಭಾಸ್ಕರ್, ಶಿಖಾ ತಾಲ್ಸಾನಿಯಾ ಹಾಗೂ ಸುಮಿತ್ ವ್ಯಾಸ್ ಮುಖ್ಯ ಪಾತ್ರಗಳಲ್ಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

 

Comments (Click here to Expand)