varthabharthi

ಸಿನಿಮಾ

ಸ್ಯಾಂಡಲ್‌ವುಡ್‌ಗೆ ತಮನ್ನಾ

ವಾರ್ತಾ ಭಾರತಿ : 9 Jun, 2018

ದಕ್ಷಿಣದ ಸೂಪರ್‌ಸ್ಟಾರ್ ನಟಿ ತಮನ್ನಾ ಮತ್ತೊಮ್ಮೆ ಸ್ಯಾಂಡಲ್‌ವುಡ್‌ಗೆ ಆಗಮಿಸಲಿದ್ದಾರೆ.ಆದರೆ ಈ ಬಾರಿ ಪೂರ್ಣ ಪ್ರಮಾಣದ ನಾಯಕಿಯಾಗಿ ಆಕೆ ನಟಿಸಲಿದ್ದಾರೆ. ‘ಜಾಗ್ವಾರ್ ’ ಚಿತ್ರದಲ್ಲಿ ಹಾಡಿನ ದೃಶ್ಯದಲ್ಲಿ ಹೆಜ್ಜೆ ಹಾಕಿದ್ದ ತಮನ್ನಾ ಈ ವರ್ಷದ ಅಂತ್ಯದ ವೇಳೆಗೆ ಕನ್ನಡ ಚಿತ್ರವೊಂದಕ್ಕಾಗಿ ಬಣ್ಣಹಚ್ಚಲಿದ್ದಾರೆ. ಬಾಲಿವುಡ್ ಚಿತ್ರ ಕ್ವೀನ್‌ನ ತೆಲುಗು ರಿಮೇಕ್‌ನಲ್ಲಿ ನಟಿಸುತ್ತಿರುವ ತಮನ್ನಾ ಶೂಟಿಂಗ್‌ಗಾಗಿ ಮೈಸೂರಿಗೆ ಆಗಮಿಸಿದ್ದರು. ಕ್ವೀನ್‌ನ ತೆಲುಗು,ಕನ್ನಡ ಹಾಗೂ ತಮಿಳು ಅವತರಣಿಕೆಗಳು ಏಕಕಾಲದಲ್ಲಿ ತಯಾರಾಗುತ್ತಿದ್ದು, ಮೈಸೂರಿನಲ್ಲಿ ಒಟ್ಟಿಗೆ ಚಿತ್ರೀಕರಣ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಕನ್ನಡದ ಕ್ವೀನ್‌ನ ನಾಯಕಿ ಪಾರುಲ್ ಯಾದವ್‌ರ ಹುಟ್ಟುಹಬ್ಬವನ್ನು ಚಿತ್ರದ ಸೆಟ್‌ನಲ್ಲಿ ಆಚರಿಸಿದ ವೇಳೆ ತಮನ್ನಾ ತಾನು ಸ್ಯಾಂಡಲ್‌ವುಡ್ ಚಿತ್ರದಲ್ಲಿ ನಟಿಸಲಿರುವ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಆದರೆ ಚಿತ್ರದ ನಿರ್ಮಾಪಕ, ನಿರ್ದೇಶಕ ಅಥವಾ ನಾಯಕ ಯಾರೆಂಬ ವಿಷಯವನ್ನು ಅವರು ಗುಟ್ಟಾಗಿಟ್ಟಿದ್ದಾರೆ. ಅಂತೂ ತಮನ್ನಾರ ಎಂಟ್ರಿ ಸ್ಯಾಂಡಲ್‌ವುಡ್‌ನಲ್ಲಿ ಕುತೂಹಲ ಸೃಷ್ಟಿಸಿರುವುದಂತೂ ನಿಜ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)