varthabharthi

ಕರಾವಳಿ

ನಂತೂರ್ ಸರ್ಕಲ್ ಬಳಿ ಅಪಘಾತ

ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಟೆಂಪೊ: ದಂಪತಿ ಮೃತ್ಯು

ವಾರ್ತಾ ಭಾರತಿ : 12 Jun, 2018

ಮಂಗಳೂರು, ಜೂ.12: ನಗರದ ನಂತೂರ್ ಸರ್ಕಲ್ ಬಳಿ ಮಂಗಳವಾರ ಸಂಜೆ ನಡೆದ ಟೆಂಪೊ ಮತ್ತು ದ್ವಿಚಕ್ರ ವಾಹನ ನಡುವಿನ ಅಪಘಾತದಲ್ಲಿ ಗಂಭೀರ ಗಾಯಗೊಂಡ ದಂಪತಿ ಮೃತಪಟ್ಟಿದ್ದಾರೆ.

ಮೃತರನ್ನು ಕಾಪುವಿನ ನಿವಾಸಿ ಮುಹಮ್ಮದ್ ಸಮೀರ್ (32) ಮತ್ತು ಅವರ ಪತ್ನಿ ಪುತ್ತೂರಿನ ಅಮ್ರೀನ್ (20) ಎಂದು ಗುರುತಿಸಲಾಗಿದೆ.

ಸಮೀರ್ ಮತ್ತು ಅಮ್ರೀನ್ ಮಂಗಳವಾರ ಸಂಜೆ ಸಂಬಂಧಿಕರ ಮನೆಗೆಂದು ಕಾಪುವಿನಿಂದ ಮಂಗಳೂರಿಗೆ ದ್ವಿಚಕ್ರ ವಾಹನದಲ್ಲಿ ಹೊರಟಿದ್ದರು. ಸಮೀರ್ ಚಲಾಯಿಸುತ್ತಿದ್ದ ವಾಹನ ನಂತೂರ್ ವೃತ್ತ ತಲುಪುತ್ತಿದ್ದಂತೆ ಈಚರ್ ಟೆಂಪೊವೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದಿದೆ. ಪರಿಣಾಮವಾಗಿ ಇಬ್ಬರೂ ರೆಸ್ತಗೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅಮ್ರೀನ್ ಕೆಲವೇ ನಿಮಿಷಗಳಲ್ಲಿ ಕೊನೆಯುಸಿರೆಳೆದರೆ ಸಮೀರ್ ರಾತ್ರಿ ಮೃತಪಟ್ಟಿದ್ದಾರೆ. ಇಬ್ಬರ ಮೃತದೇವಹವು ಖಾಸಗಿ ಆಸ್ಪತ್ರೆಯಲ್ಲಿಡಲಾಗಿದೆ.

ಈ ಬಗ್ಗೆ ಸಂಚಾರ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)