ಮುಂಬೈಯ ಬಹುಮಹಡಿ ಕಟ್ಟಡದಲ್ಲಿ ಅಗ್ನಿ ಅವಘಡ: 90 ಮಂದಿಯ ಸ್ಥಳಾಂತರ
ದೀಪಿಕಾ ಪಡುಕೋಣೆ ಕೂಡ ಇಲ್ಲಿನ ನಿವಾಸಿ
ಮುಂಬೈ, ಜೂ.13: ದಕ್ಷಿಣ ಮುಂಬೈಯಲ್ಲಿರುವ ಬಹುಮಹಡಿ ಕಟ್ಟಡವೊಂದರಲ್ಲಿ ಭಾರೀ ಅಗ್ನಿ ದುರಂತವೊಂದು ಸಂಭವಿಸಿದೆ. ಪ್ರಭಾದೇವಿಯಲ್ಲಿರುವ ಭೀಮಂಡಿ ಟವರ್ಸ್ ನ 33ನೆ ಮಹಡಿಯಲ್ಲಿ ಬೆಂಕಿ ಹೊತ್ತಿ ಉರಿದಿದೆ.
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಇಲ್ಲಿ ಅಪಾರ್ಟ್ ಮೆಂಟ್ ಒಂದನ್ನು ಹೊಂದಿದ್ದಾರೆ. ಸುಮಾರು 90 ಮಂದಿಯನ್ನು ಮಹಡಿಯಿಂದ ಸ್ಥಳಾಂತರಿಸಲಾಗಿದೆ. ಅಗ್ನಿ ಅವಘಡ ಸಂಭವಿಸಿದಾಗ ದೀಪಿಕಾ ಪಡುಕೋಣೆ ಅಪಾರ್ಟ್ ಮೆಂಟ್ ನಲ್ಲಿರಲಿಲ್ಲ ಎನ್ನಲಾಗಿದೆ.
Next Story