varthabharthi

ಕರ್ನಾಟಕ

ಪ್ರಗತಿಪರರ ಹತ್ಯೆ ಹಿಂದೆ ಹಿಂದುತ್ವವಾದಿಗಳ ಕೈವಾಡ: ಪ್ರೊ.ಮಹೇಶ್ ಚಂದ್ರಗುರು ಆರೋಪ

ವಾರ್ತಾ ಭಾರತಿ : 13 Jun, 2018

ಮೈಸೂರು,ಜೂ.13: ಪ್ರಗತಿಪರರ ಹತ್ಯೆ ಹಿಂದೆ ಹಿಂದುತ್ವವಾದಿಗಳ ಕೈವಾಡವಿದೆ ಎಂದು ಪ್ರಗತಿಪರ ಚಿಂತಕ ಪ್ರೊ.ಮಹೇಶ್ ಚಂದ್ರಗುರು ಆರೋಪಿಸಿದ್ದಾರೆ.

ತಮ್ಮ ನಿವಾಸದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಂ.ಎಂ.ಕಲಬುರ್ಗಿ, ಗೌರಿ, ದಾಬೋಲ್ಕರ್, ಪನ್ಸಾರೆ ಹತ್ಯೆಗೆ ಕೇಂದ್ರ ಸರಕಾರದ ಪರೋಕ್ಷ ಬೆಂಬಲವಿದೆ. ಎನ್.ಡಿ.ಎ.ಸರಕಾರ ಬಂದ ಮೇಲೆ ಪ್ರಗತಿಪರರ ಹತ್ಯೆ ಹೆಚ್ಚಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗೌರಿ ಹತ್ಯೆಯ ಹಂತಕರೇ ಕಲಬುರ್ಗಿ, ದಾಬೋಲ್ಕರ್, ಪನ್ಸಾರೆಯನ್ನು ಹತ್ಯೆ ಮಾಡಿರಬಹುದು. ಈ ಹತ್ಯೆಗಳ ಹಿಂದೆ ಹಿಂದೂತ್ವವಾದಿಗಳ ಕೈವಾಡವಿದೆ. ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ಇರಬಹುದು, ಅಥವಾ ಹಿಂದುತ್ವ ವಾದವನ್ನು ಬಿತ್ತುತ್ತಿರುವ ಸಂಘಟನೆಗಳೇ ಇದರ ಹಿಂದೆ ಇರಬಹುದು ಎಂದ ಅವರು, ಸಂಸದರಾದ ಪ್ರತಾಪ್ ಸಿಂಹ, ಶೋಭಾ ಕರಂದ್ಲಾಜೆ, ನಳೀನ್‍ ಕುಮಾರ್ ಕಟೀಲ್ ಅವಿವೇಕಿಗಳು. ಅವರಿಗೂ ಗೌರಿ ಹಂತಕರಿಗೂ ಸಂಬಂಧವಿದೆ ಎಂದೆನಿಸುತ್ತದೆ ಎಂದು ಆರೋಪಿಸಿದರು.

ನನಗೆ ಭದ್ರತೆ ನೀಡಿ ಎಂದು ಯಾರ ಬಳಿಯೂ ಅರ್ಜಿ ಹಾಕಿರಲಿಲ್ಲ, ಆದರೆ ಸರಕಾರವೇ ಭದ್ರತೆ ಒದಗಿಸಿದೆ ಎಂದು ಹೇಳಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)