varthabharthi

ಬೆಂಗಳೂರು

ಡಿ.ಎಸ್.ಮ್ಯಾಕ್ಸ್ ಕಲಾಶ್ರೀ ಪ್ರಶಸ್ತಿ ಪ್ರಕಟ

ವಾರ್ತಾ ಭಾರತಿ : 13 Jun, 2018

ಬೆಂಗಳೂರು, ಜೂ.13: ಡಿ.ಎಸ್.ಮ್ಯಾಕ್ಸ್ ಪ್ರಾಪರ್ಟಿಸ್ ಕಂಪನಿಯ ವಾರ್ಷಿಕೋತ್ಸವ ಅಂಗವಾಗಿ ಚಿತ್ರ ನಟ ಡಾ.ಶಿವರಾಜ್‌ಕುಮಾರ್ ಸೇರಿದಂತೆ 13 ಜನರಿಗೆ ಡಿ.ಎಸ್.ಮ್ಯಾಕ್ಸ್ ಕಲಾಶ್ರೀ ನ್ಯಾಷನಲ್ ಅವಾರ್ಡ್ ಪ್ರದಾನ ಮಾಡಲಾಗುತ್ತಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಂಪನಿಯ ನಿರ್ದೇಶಕ ಎಸ್.ಪಿ.ದಯಾನಂದ್, ಪ್ರತಿ ವರ್ಷವೂ ವಾರ್ಷಿಕೋತ್ಸವ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿರುವವರನ್ನು ಗುರುತಿಸಿ ಗೌರವಿಸಲಾಗುತ್ತದೆ. ಅಲ್ಲದೆ, ನಮ್ಮ ಸಂಸ್ಥೆಯಿಂದ ಮನೆ ಖರೀದಿ ಮಾಡಿರುವ 50 ಜನ ಗ್ರಾಹಕರಿಗೆ ‘ಫ್ಲಾಟ್ ಪತ್ನಿ’ ಹೆಸರಿನ ಬಹುಮಾನ ನೀಡಲಾಗುತ್ತದೆ ಹಾಗೂ ಎಲ್ಲ ಗ್ರಾಹಕರಿಗೆ ವಿಶೇಷ ಉಡುಗೊರೆ ನೀಡಲಾಗುತ್ತದೆ ಎಂದು ಹೇಳಿದರು.

ಪ್ರಶಸ್ತಿ ಪಡೆದವರು: ಚಿತ್ರನಟ ಡಾ.ಶಿವರಾಜ್‌ಕುಮಾರ್, ಬಹುಭಾಷಾ ನಟಿ ಕೆ.ಆರ್.ವಿಜಯಾ ಮತ್ತು ಸರಿತಾ, ನಿರ್ದೇಶಕ, ಬರಹಗಾರ ಪಿ.ವಾಸು, ನಿರ್ದೇಶಕ ಪಿ.ಶೇಷಾದ್ರಿ, ಹಿನ್ನೆಲೆ ಗಾಯಕಿ ಕಸ್ತೂರಿ ಶಂಕರ್, ನಟಿ ವನಿತಾ ವಾಸು, ಜಲಜ ಮತ್ತು ಪ್ರಿಯಾಂಕ ಉಪೇಂದ್ರ, ರಾಜಕಾರಣಿ ದೇವನ್, ಹಿನ್ನೆಲೆ ಗಾಯಕ ವಿಜಯ್ ಪ್ರಕಾಶ್, ನಿರ್ಮಾಪಕ ರಕ್ಷಿತ್ ಶೆಟ್ಟಿ, ನಟ ಶಬಾಜ್‌ ಖಾನ್‌ಗೆ ಪ್ರಶಸ್ತಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜೂ.19 ರಂದು ವೈಯಾಲಿಕಾವಲ್‌ನಲ್ಲಿರುವ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ, ಶಾಸಕ ಆರ್.ಅಶೋಕ್, ಬೆಂಗಳೂರು ನಗರ ಪೊಲೀಸ್ ಕಮೀಷನರ್ ಟಿ.ಸುನೀಲ್ ಕುಮಾರ್ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)