varthabharthi

ಬೆಂಗಳೂರು

ಬೆಂಗಳೂರು ಬ್ಯಾರಿ ಜಮಾಅತ್ ಈದ್ ನಮಾಝ್ ವೇಳಾಪಟ್ಟಿ

ವಾರ್ತಾ ಭಾರತಿ : 13 Jun, 2018

ಬೆಂಗಳೂರು, ಜೂ.13: ಬೆಂಗಳೂರು ಬ್ಯಾರಿ ಜಮಾತ್ ವತಿಯಿಂದ ಈದುಲ್ ಫಿತ್ರ್ ನಮಾಝ್ ನಗರದ ಆರ್.ಟಿ ನಗರದ ಕನಕನಗರ 7ನೇ ಅಡ್ಡ ರಸ್ತೆಯಲ್ಲಿರುವ ಮದ್ರಸಾದಲ್ಲಿ ನಡೆಯಲಿದ್ದು, ಮೌಲಾನಾ ರಫೀಕ್ ಉಪ್ಪಿನಂಗಡಿಯವರು ನೇತೃತ್ವ ನೀಡಲಿದ್ದಾರೆ ಎಂದು ಜಮಾತ್ ಪ್ರಧಾನ ಕಾರ್ಯದರ್ಶಿ ಇಬ್ರಾಹೀಮ್ ಎ.ಜೋಕಟ್ಟೆ ತಿಳಿಸಿದ್ದಾರೆ.

ಈದುಲ್ ಫಿತ್ರ್ ಶುಕ್ರವಾರವಾದಲ್ಲಿ ಈದ್ ನಮಾಝ್ ಬೆಳಗ್ಗೆ 8 ಗಂಟೆಗೆ, ಶನಿವಾರವಾದಲ್ಲಿ ಈದ್ ನಮಾಝ್ ಬೆಳಗ್ಗೆ 9 ಗಂಟೆಗೆ ನಡೆಯಲಿದೆ. ಹೆಚ್ಚಿನ ವಿವರಗಳಿಗೆ ಜಮಾತ್ ಕಾರ್ಯದರ್ಶಿ ಸಿರಾಜ್ ಎಂ ಹುಸೈನ್ ರ ಮೊಬೈಲ್ ಸಂಖ್ಯೆ-95388 09030 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)