varthabharthi

ಗಲ್ಫ್ ಸುದ್ದಿ

ಈದುಲ್ ಫಿತ್ರ್: ದುಬೈ ಶೈಕ್ಷಣಿಕ ಸಂಸ್ಥೆಗಳಿಗೆ 4 ದಿನ ರಜೆ

ವಾರ್ತಾ ಭಾರತಿ : 13 Jun, 2018

ದುಬೈ, ಜೂ. 12: ಈದುಲ್ ಫಿತ್ರ್ ಪ್ರಯುಕ್ತ ದುಬೈಯ ಶೈಕ್ಷಣಿಕ ಸಂಸ್ಥೆಗಳಿಗೆ ಗುರುವಾರದಿಂದ ರವಿವಾರದವರೆಗ ರಜೆ ಘೋಷಿಸಲಾಗಿದೆಯೆಂದು ಜ್ಞಾನ ಮತ್ತು ಮಾನವ ಸಂಪನ್ಮೂಲಾಭಿವೃದ್ಧಿ ಪ್ರಾಧಿಕಾರ (ಕೆಎಚ್‌ಡಿಎ) ಪ್ರಕಟನೆಯಲ್ಲಿ ತಿಳಿಸಿದೆ. ಶಿಕ್ಷಣ ಸಂಸ್ಥೆಗಳು ಇಲ್ಲಿನ ಧಾರ್ಮಿಕ ಸಚಿವಾಲಯದ ಅಧೀನದಲಿದ್ದರೆ ಅವುಗಳ ರಜೆಯನ್ನು ಸೋಮವಾರದವರೆಗೆ ವಿಸ್ತರಿಸಲಾಗುವುದು ಎಂದು ಅದು ಹೇಳಿದೆ.

ಖಾಸಗಿ ಸಂಸ್ಥೆಗಳಿಗೆ 2 ದಿನ ರಜೆ

ಈದುಲ್ ಫಿತ್ರ್ ಸಂಬಂಧ ಖಾಸಗಿ ಸಂಸ್ಥೆಗಳಿಗೆ ಎರಡು ದಿನಗಳ ರಜೆಯಿರುವುದಾಗಿ ಯುಎಇ ಮಾನವ ಸಂಪನ್ಮೂಲ ಸ್ವದೇಶೀಕರಣ ಸಚಿವಾಲಯ ಹೇಳಿದೆ.

ಶವ್ವಾಲ್ ತಿಂಗಳ ಒಂದು ಮತ್ತು ಎರಡನೇ ದಿನದಂದು ಇಲ್ಲಿನ ಖಾಸಗಿ ಸಂಸ್ಥೆಗಳು ಕೆಲಸ ಮಾಡುವಂತಿಲ್ಲ. ಶುಕ್ರವಾರ ಈದುಲ್ ಫಿತ್ರ್ ಆದರೆ ಅಂದು ಹಾಗೂ ಶನಿವಾರ ರಜೆಯಿರಲಿದ್ದು, ಶನಿವಾರ ಹಬ್ಬವಾದರೆ ಶನಿವಾರ ಹಾಗೂ ರವಿವಾರ ರಜೆಯಿರುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)