ಊದುಬತ್ತಿ ಮಹಿಮೆ: ಹೊಸ ಬಿಎಂಡಬ್ಲ್ಯು ಕಾರು ಭಸ್ಮ
ಶಾಂಘೈ, ಜೂ.15: ಇದನ್ನು ಮೂರ್ಖತನವೆಂದು ಕರೆಯಬೇಕೋ ಅಥವಾ ದುರಾದೃಷ್ಟ ಎನ್ನಬೇಕೋ ಗೊತ್ತಿಲ್ಲ. ಹೊಸ ಬಿಎಂಡಬ್ಲ್ಯು ಕಾರನ್ನು ಪೂಜೆ ಮಾಡಲು ಹೋದ ಪೂರ್ವ ಚೀನಾದ ವ್ಯಕ್ತಿಯೊಬ್ಬ ಕಾರನ್ನು ಕಳೆದುಕೊಂಡಿದ್ದಾನೆ.
ಯಾಂಗ್ಝೌ ಸಿಟಿಯಲ್ಲಿ ಈ ಘಟನೆ ಇತ್ತೀಚೆಗೆ ನಡೆದಿದೆ. ಘಟನೆ ನಡೆಯುವ ಕೆಲವೇ ನಿಮಿಷಗಳ ಮೊದಲು ನೆರೆ ಮನೆಯವರು ತೆಗೆದ ವಿಡಿಯೋದಲ್ಲಿ ಹೊಸ ಕಾರು ಖರೀದಿಸಿದ ವ್ಯಕ್ತಿ ಹಾಗೂ ಆತನ ಪತ್ನಿ ಕಾರು ಖರೀದಿಸಲು ಅನುಗ್ರಹಿಸಿದ ದೇವರನ್ನು ಪೂಜಿಸಲು ದೊಡ್ಡ ಗಾತ್ರದ ಊದುಬತ್ತಿ ಹಚ್ಚುತ್ತಿರುವುದು ಸೆರೆಯಾಗಿದೆ. ಒಂದು ಬಟ್ಟೆಯ ಮೂಲಕ ದೊಡ್ಡ ಗಾತ್ರದ ಊದುಬತ್ತಿ ಹಚ್ಚಿಸಿದ ಬಳಿಕ ಬಟ್ಟೆಯನ್ನು ಕಾರಿನ ಬಳಿಯೇ ಇಟ್ಟಿದ್ದ ಪರಿಣಾಮ ಬೆಂಕಿಯ ಕಿಡಿ ಕಾರಿಗೆ ತಗಲಿ ಸುಟ್ಟು ಭಸ್ಮವಾಗಿದೆ ಎಂದು ಅಗ್ನಿ ಶಾಮಕ ಇಲಾಖೆ ಶಂಕೆ ವ್ಯಕ್ತಪಡಿಸಿದೆ.
ಘಟನೆಯ ಬಳಿಕ ತೆಗೆದಿರುವ ಚಿತ್ರದಲ್ಲಿ ಬಿಎಂಡಬ್ಲ್ಯು ಕಾರು ಸಂಪೂರ್ಣ ಭಸ್ಮವಾಗಿದ್ದು ದುರಸ್ತಿ ಮಾಡದ ಸ್ಥಿತಿಗೆ ತಲುಪಿದೆ.
Next Story