ಮಡಿಕೇರಿ : ವಿದ್ಯುತ್ ಸ್ಪರ್ಷಗೊಂಡು ಹಸು ಬಲಿ
ಮಡಿಕೇರಿ, ಜೂ.17: ಮೇಯಲು ಹೋದ ಹಸುವೊಂದು ವಿದ್ಯುತ್ ಸ್ಪರ್ಷಗೊಂಡು ಸಾವನ್ನಪ್ಪಿರುವ ಘಟನೆ ಚೆಟ್ಟಳ್ಳಿ ಗ್ರಾಮದಲ್ಲಿ ನಡೆದಿದೆ.
ಸ್ಥಳೀಯ ನಿವಾಸಿ ಅಯ್ಯಂಡ್ರ ಯಾದವ ಅವರಿಗೆ ಸೇರಿದ 7 ವರ್ಷದ ಹಸು ಇದಾಗಿದ್ದು, 15 ದಿನಗಳ ಹಿಂದೆಯಷ್ಟೇ ಕರುವಿಗೆ ಜನ್ಮ ನೀಡಿತ್ತು.
ಪೊಲೀಸ್ ಅಧಿಕಾರಿಗಳು ಹಾಗೂ ಪಶು ವೈದ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story