ಮಡಿಕೇರಿ : ಅಭ್ಯಾಲ ಜಲಧಾರೆಯ ಆಕರ್ಷಣೆ
ಮಡಿಕೇರಿ, ಜೂ.17 : ಕಳೆದ ಒಂದು ವಾರ ಸುರಿದ ಭಾರೀ ಮಳೆಗೆ ಕೊಡಗಿನ ಜಲಪಾತಗಳು ತುಂಬಿ ಹರಿಯುತ್ತಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿವೆ.
ಮಡಿಕೇರಿಯ ಚೆಟ್ಟಳ್ಳಿ ರಸ್ತೆಯಲ್ಲಿ ಎತ್ತರದಿಂದ ದುಮ್ಮಿಕ್ಕುತ್ತಿರುವ ಅಭ್ಯಾಲ ಜಲಪಾತ ಪ್ರಕೃತಿ ಪ್ರಿಯರನ್ನು ತನ್ನೆಡೆಗೆ ಸೆಳೆಯುತ್ತಿದೆ. ಈ ಮಾರ್ಗವಾಗಿ ತೆರಳುತ್ತಿರುವ ಪ್ರವಾಸಿಗರು ಜಲಧಾರೆಯಲ್ಲಿ ಮಿಂದು ಮುಂದೆ ಸಾಗುತ್ತಿದ್ದಾರೆ. ಜಿಲ್ಲೆಯ ಇತರ ಭಾಗಗಳ ಜಲಪಾತಗಳು ಕೂಡ ಜಲರಾಶಿಯಿಂದ ಸೌಂದರ್ಯವನ್ನು ಹೆಚ್ಚಿಸಿಕೊಂಡಿದ್ದು, ಮಾನ್ಸೂನ್ ಕಾಲದ ಪ್ರವಾಸಿಗರಿಗೆ ಇವುಗಳೇ ಆಕರ್ಷಣೀಯ ಕೇಂದ್ರಗಳಾಗಿವೆ.
Next Story